masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 65,002 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 996 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25 ಲಕ್ಷದ ಗಡಿ ದಾಟಿದ್ದು 25.26 ಲಕ್ಷ ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 49,036 ಆಗಿದೆ. ದೇಶದಲ್ಲಿ 20 ಲಕ್ಷದಿಂದ 25 ಲಕ್ಷ ಪ್ರಕರಣ ದೃಢಪಡಲು ಕೇವಲ 8 ದಿನ ತೆಗೆದುಕೊಂಡಿದೆ.

ದೇಶದಲ್ಲಿ ಕೊರೋನಾ ಮಿಂಚಿನ ಓಟ:

1 ಪ್ರಕರಣದಿಂದ 5 ಲಕ್ಷ ಪ್ರಕರಣಕ್ಕೆ 148 ದಿನ

5 ಲಕ್ಷದಿಂದ 10 ಲಕ್ಷ ಪ್ರಕರಣಕ್ಕೆ 20 ದಿನ

10 ಲಕ್ಷದಿಂದ 15 ಲಕ್ಷ ಪ್ರಕರಣಕ್ಕೆ 12 ದಿನ

15 ಲಕ್ಷದಿಂದ 20 ಲಕ್ಷ ಪ್ರಕರಣಕ್ಕೆ 9 ದಿನ

20 ಲಕ್ಷದಿಂದ 285 ಲಕ್ಷ ಪ್ರಕರಣಕ್ಕೆ 8 ದಿನ

ಕಳೆದ 24 ಗಂಟೆಗಳಲ್ಲಿ 57,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 18.08 ಲಕ್ಷ ದಾಟಿದ್ದು, 6.68 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 71.17% ಇದ್ದು, ಸಾವಿನ ಪ್ರಮಾಣ 1.95% ಇದೆ. ಆಗಸ್ಟ್​ 14ರಂದು ದೇಶದಲ್ಲಿ 8.68 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.85 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.51 ಲಕ್ಷ ಪ್ರಕರಣ (19,000+ ಸಾವು)

2. ಆಂಧ್ರಪ್ರದೇಶ: 89,000+ ಪ್ರಕರಣ (2,400+ ಸಾವು)

3. ಕರ್ನಾಟಕ: 79,000+ ಪ್ರಕರಣ (3,700+ ಸಾವು)

4. ತಮಿಳುನಾಡು: 53,000+ ಪ್ರಕರಣ (5,500+ ಸಾವು)

5. ಉತ್ತರಪ್ರದೇಶ: 50,000+ ಪ್ರಕರಣ (2,300+ ಸಾವು)

6. ಬಿಹಾರ: 32,000+ ಪ್ರಕರಣ (442 ಸಾವು)

7. ಪಶ್ಚಿಮ ಬಂಗಾಳ: 26,000+ ಪ್ರಕರಣ (2,300+ ಸಾವು)

8. ತೆಲಂಗಾಣ: 23,000+ ಪ್ರಕರಣ (684 ಸಾವು)

9. ಅಸ್ಸಾಂ: 22,000+ ಪ್ರಕರಣ (175 ಸಾವು)

10. ಒಡಿಶಾ: 15,000+ ಪ್ರಕರಣ (324 ಸಾವು)

-masthmagaa.com

Contact Us for Advertisement

Leave a Reply