masthmagaa.com:

ಕೊರೋನಾಗೆ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್​-V’ ಲಸಿಕೆ 91.4% ಪರಿಣಾಮಕಾರಿ ಅಂತ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್ (RDIF) ಪುನರುಚ್ಚರಿಸಿದೆ. 22,714 ಸ್ವಯಂ ಸೇವಕರ ಮೇಲೆ ನಡೆದ ಲಸಿಕೆ ಪ್ರಯೋಗದ ಅಂಕಿ ಅಂಶಗಳನ್ನ ಆಧಾರವಾಗಿಟ್ಟುಕೊಂಡು ಈ ರಿಸಲ್ಟ್ ನೀಡಿದೆ. ಈ ಹಿಂದೆ ಇಂಥದ್ದೇ ಅಂಕಿ ಅಂಶ ಬಿಡುಗಡೆ ಮಾಡಿದ್ದ ಕಂಪನಿ, ಲಸಿಕೆಯ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ 91.4% ಪರಿಣಾಮಕಾರಿ ಮತ್ತು 42 ದಿನಗಳ ಬಳಿಕ 95% ಪರಿಣಾಮಕಾರಿ ಅಂತ ಹೇಳಿತ್ತು. ಇಷ್ಟು ಪರಿಣಾಮಾಕರಿ ಎನಿಸಿದ್ರೂ ಯಾವ ದೇಶ ಕೂಡ ರಷ್ಯಾ ಲಸಿಕೆಯನ್ನ ಖರೀದಿಸಲು ಮುಂದಾಗಿಲ್ಲ. ಇದಕ್ಕೆ ಕಾರಣ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ ಆರಂಭವಾಗುವ ಮೊದಲೇ ಲಸಿಕೆಗೆ ಅನುಮೋದನೆ ಕೊಟ್ಟಿದ್ದು ಇರಬಹುದು.

ಯಾವ ಲಸಿಕೆ ಎಷ್ಟು ಪರಿಣಾಮಕಾರಿ..?

ಫೈಝರ್ – 95%

ಮೊಡೆರ್ನಾ – 94.5%

ಸ್ಪುಟ್ನಿಕ್-V – 91.4%

ಆಕ್ಸ್​ಫರ್ಡ್ – 90%

-masthmagaa.com

Contact Us for Advertisement

Leave a Reply