masthmagaa.com:

ದೇಶದಲ್ಲಿ ಕೊರೋನಾ ಹಾವಳಿ ಮುಂದುವರಿದಿದ್ದು ಒಟ್ಟು ಸೋಂಕಿತರ ಸಂಖ್ಯೆ 27 ಲಕ್ಷ ದಾಟಿದೆ. ಇದುವರೆಗೆ 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಪ್ರಕರಣ, ಅತಿ ಹೆಚ್ಚು ಸಾವು, ಅತಿ ಹೆಚ್ಚು ಗುಣಮುಖ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿ ಮುಂದುವರಿದೆ.

ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಎರಡನೇ ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದ್ರೆ ಕಳೆದ ಮೂರು ವಾರಗಳ ಅವಧಿಯಲ್ಲಿ ಜಾರ್ಖಂಡ್, ಬಿಹಾರ, ಒಡಿಶಾ, ಅಸ್ಸಾಂ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಳಾದಲ್ಲಿ ಸೋಂಕು ವೇಗ ಪಡೆದುಕೊಂಡಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.55 ಲಕ್ಷ ಪ್ರಕರಣ (20,000+ ಸಾವು)

2. ಆಂಧ್ರಪ್ರದೇಶ: 84,000+ ಪ್ರಕರಣ (2,700+ ಸಾವು)

3. ಕರ್ನಾಟಕ: 80,000+ ಪ್ರಕರಣ (4,000+ ಸಾವು)

4. ತಮಿಳುನಾಡು: 54,000+ ಪ್ರಕರಣ (5,800+ ಸಾವು)

5. ಉತ್ತರಪ್ರದೇಶ: 50,000+ ಪ್ರಕರಣ (2,500+ ಸಾವು)

6. ಬಿಹಾರ: 29,000+ ಪ್ರಕರಣ (468 ಸಾವು)

7. ಪಶ್ಚಿಮ ಬಂಗಾಳ: 27,000+ ಪ್ರಕರಣ (2,400+ ಸಾವು)

8. ಅಸ್ಸಾಂ: 22,000+ ಪ್ರಕರಣ (197 ಸಾವು)

9. ತೆಲಂಗಾಣ: 21,000+ ಪ್ರಕರಣ (711 ಸಾವು)

10. ಒಡಿಶಾ: 18,000+ ಪ್ರಕರಣ (353 ಸಾವು)

-masthmagaa.com

Contact Us for Advertisement

Leave a Reply