masthmagaa.com:

ರಾಹುಲ್ ಗಾಂಧಿ ನರ್ವಸ್.. ಅಧ್ಯಾಪಕರನ್ನ ಮೆಚ್ಚಿಸಲು ತುದಿಗಾಲಲ್ಲಿ ನಿಂತಿರುವ ವಿದ್ಯಾರ್ಥಿ.. ವಿಷಯವನ್ನ ಆಳವಾಗಿ ಅರ್ಥ ಮಾಡಿಕೊಳ್ಳುವ ಉತ್ಸಾಹ ಇಲ್ಲದ.. ಗ್ರಹಿಕಾ ಸಾಮರ್ಥ್ಯ ಕಡಿಮೆ ಇರುವ ವ್ಯಕ್ತಿ ಅಂತ ಬರಾಕ್ ಒಬಾಮಾ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದಂತೇ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ವಾಕ್ಸಮರ ಕೂಡ ಜೋರಾಗಿದೆ. ‘ರಾಹುಲ್ ಗಾಂಧಿಯನ್ನ ಒಬಾಮಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ’ ಅಂತ ಬಿಜೆಪಿ ವ್ಯಂಗ್ಯವಾಡಿದ್ರೆ .. ನಮ್ಮ ನಾಯಕ ಹಾಗಲ್ಲ ಅಂತ ಡಿಫೆಂಡ್ ಮಾಡಿಕೊಳ್ಳಲು ಕಾಂಗ್ರೆಸ್ ಅಖಾಡಕ್ಕೆ ಇಳಿದಿದೆ. ‘ಒಬಾಮಾ ಮತ್ತು ರಾಹುಲ್ ಗಾಂಧಿ ಭೇಟಿ ಕೆಲವೇ ಹೊತ್ತಿನದ್ದು ಆಗಿರಬಹುದು. ಅಲ್ಲದೆ ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದಾಗ ಅಂದ್ರೆ 8-10 ವರ್ಷಗಳ ಹಿಂದಿನ ಭೇಟಿ ಅದು. ಕೆಲವೇ ಕೆಲವು ಭೇಟಿಯಲ್ಲಿ ಯಾವುದೇ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ರಾಹುಲ್ ಗಾಂಧಿಯವರ ವ್ಯಕ್ತಿತ್ವ  ಬದಲಾಗಿದೆ. ಅವರು ಈಗ ಸಾಕಷ್ಟು ಅನುಭವ ಗಳಿಸಿದ್ದಾರೆ’ ಅಂತ ಕಾಂಗ್ರೆಸ್​ನ ತಾರಿಖ್ ಅನ್ವರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply