masthmagaa.com:

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್​ ಮೀರಿಸಿರುವ ಭಾರತ ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ. ಆಘಾತಕಾರಿ ಅಂದ್ರೆ ಹತ್ತಿರ ಹತ್ತಿರ ಒಂದು ತಿಂಗಳಿನಿಂದ ಭಾರತದಲ್ಲೇ ಅತಿ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗ್ತಿದೆ. ಅದ್ರಲ್ಲೂ ಸತತ ಎರಡು ದಿನಳಿಂದ 90,000ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿರೋದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಂತಿದೆ. ಸಕ್ರಿಯ ಪ್ರಕರಣಗಳು ಹೆಚ್ಚಿರುವ ಟಾಪ್-10 ರಾಜ್ಯಗಳ ಪಟ್ಟಿಯಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿರೋದು ಗಮನಾರ್ಹ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 2.36 ಲಕ್ಷ ಪ್ರಕರಣ (26,000+ ಸಾವು)

2. ಆಂಧ್ರಪ್ರದೇಶ: 99,000+ ಪ್ರಕರಣ (4,400+ ಸಾವು)

3. ಕರ್ನಾಟಕ: 99,000+ ಪ್ರಕರಣ (6,300+ ಸಾವು)

4. ಉತ್ತರಪ್ರದೇಶ: 61,000+ ಪ್ರಕರಣ (3,900+ ಸಾವು)

5. ತಮಿಳುನಾಡು: 51,000+ ಪ್ರಕರಣ (7,800+ ಸಾವು)

6. ತೆಲಂಗಾಣ: 31,000+ ಪ್ರಕರಣ (895 ಸಾವು)

7. ಅಸ್ಸಾಂ: 28,000+ ಪ್ರಕರಣ (360 ಸಾವು)

8. ಒಡಿಶಾ: 27,000+ ಪ್ರಕರಣ (546 ಸಾವು)

9. ಪಶ್ಚಿಮ ಬಂಗಾಳ: 23,000+ ಪ್ರಕರಣ (3,500+ ಸಾವು)

10. ಕೇರಳ: 22,000+ ಪ್ರಕರಣ (342 ಸಾವು)

-masthmagaa.com

Contact Us for Advertisement

Leave a Reply