ಲವ್ ಜಿಹಾದ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ..! ಇವತ್ತಿಂದ ಕಾನೂನು ರೂಪ

masthmagaa.com:

ಉತ್ತರ ಪ್ರದೇಶ: ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಸಹಿ ಹಾಕಿದ್ದಾರೆ. ಈ ಮೂಲಕ ಸುಗ್ರೀವಾಜ್ಞೆ ಇಂದಿನಿಂದ ಅಧಿಕೃತವಾಗಿ ಜಾರಿಯಾಗಿದೆ.

ಮಂಗಳವಾರ ಅಂದ್ರೆ ನವೆಂಬರ್ 24ರಂದು ಉತ್ತರ ಪ್ರದೇಶದ ಕ್ಯಾಬಿನೆಟ್ ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಪಾಸ್ ಮಾಡಿತ್ತು. ನಂತರ ಅದನ್ನು ಸಹಿಗಾಗಿ ರಾಜ್ಯಪಾಲರ ಬಳಿ ಕಳುಹಿಸಲಾಗಿತ್ತು. ಅದರಂತೆ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಇಂದು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದು, ಈ ಕಾನೂನು 6 ತಿಂಗಳವರೆಗೆ ಜಾರಿಯಲ್ಲಿ ಇರಲಿದೆ. ಅಷ್ಟರಲ್ಲಿ ವಿಧಾನಸಭೆಯಲ್ಲಿ ಮಂಡಿಸಿ ಇದನ್ನು ಪಾಸ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ 6 ತಿಂಗಳ ಬಳಿಕ ಈ ಕಾನೂನು ಅಸ್ವಿತ್ವವನ್ನು ಕಳೆದುಕೊಳ್ಳಲಿದೆ.

ಯುಪಿ ಪ್ರೊಹಿಬಿಷನ್ ಆಫ್ ಅನ್​ಲಾಫುಲ್​​ ಕನ್ವರ್ಷನ್​​ ಆಫ್ ರೆಲಿಜಿಯನ್ ಆರ್ಡಿನನ್ಸ್​​ 2020ರ ಪ್ರಕಾರ ಮೋಸದ ಮೂಲಕ ಮತಾಂತರ ಮಾಡಿದ್ರೆ 1ರಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗಲಿದೆ. ಅದೇ ರೀತಿ ಒಪ್ಪಿಗೆಯಿಂದಲೇ ಮತಾಂತರವಾಗುವವರೂ ಕೂಡ 2 ತಿಂಗಳು ಮೊದಲೇ ಜಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಬರೀ ಜೈಲು ಶಿಕ್ಷೆ ಮಾತ್ರವಲ್ಲ..15 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗುತ್ತೆ. ಅದೇ ಎಸ್​ಸಿ-ಎಸ್​​ಟಿ ಸಮುದಾಯದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರನ್ನು ಮತಾಂತರ ಮಾಡಿದ್ರೆ, 25 ಸಾವಿರ ರೂಪಾಯಿ ದಂಡ ವಿಧಿಸಲು ಈ ಕಾಯ್ದೆ ಅವಕಾಶ ನೀಡುತ್ತೆ.

-masthmagaa.com

Contact Us for Advertisement

Leave a Reply