ಬಳಕೆದಾರರಿಗೆ ಸ್ಟೇಟಸ್ ಹಾಕಿದ ವಾಟ್ಸಾಪ್​..! ಅದ್ರಲ್ಲೇನಿದೆ ಗೊತ್ತಾ..?

masthmagaa.com:

ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿಗೆ ವಿರೋಧ ವ್ಯಕ್ತವಾದ ಬಳಿಕ ಅದನ್ನು ಸರಿಪಡಿಸಿಕೊಳ್ಳಲು ಪರದಾಟ ನಡೆಸುತ್ತಿದೆ. ನಿನ್ನೆಯಷ್ಟೇ ಹೊಸ ಪಾಲಿಸಿ ಜಾರಿ ದಿನಾಂಕವನ್ನು ಮೇ ತಿಂಗಳವರೆಗೆ ಮುಂದೂಡಿದ್ದ ವಾಟ್ಸಾಪ್, ಇಂದು ಬಳಕೆದಾರರಿಗೆ 4 ಸ್ಟೇಟಸ್ ಹಾಕಿದೆ. ಅಂದ್ರೆ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್ ಕಡೆಯಿಂದಲೇ ಹಾಕಲಾದ 4 ಸ್ಟೇಟಸ್​​ಗಳು ಕಾಣಿಸುತ್ತೆ.. ಅದ್ರಲ್ಲಿ ನಿಮ್ಮ ಪ್ರೈವೆಸಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ವಾಟ್ಸಾಪ್ ನಿಮ್ಮ ವೈಯಕ್ತಿಕ ಮೆಸೇಜ್​ಗಳನ್ನು ಓದುವುದಿಲ್ಲ.. ಅದು ಎಂಡ್​​ ಟು ಎಂಡ್​ ಎನ್ಕ್ರಿಪ್ಟೆಡ್ ಆಗಿವೆ. ವಾಟ್ಸಾಪ್ ನೀವು ಶೇರ್ ಮಾಡಿರುವ ಲೊಕೇಷನ್ ನೋಡಲು ಸಾಧ್ಯವಿಲ್ಲ. ವಾಟ್ಸಾಪ್ ನಿಮ್ಮ ಕಾಂಟ್ಯಾಕ್ಟ್​ಗಳನ್ನು ಫೇಸ್​ಬುಕ್​​ ಜೊತೆ ಶೇರ್ ಮಾಡುವುದಿಲ್ಲ ಅಂತ ಈ ಸ್ಟೇಟಸ್​​ಗಳಲ್ಲಿ ಹೇಳಲಾಗಿದೆ.

ಈ ಹಿಂದೆ ವಾಟ್ಸಾಪ್ ಒಂದು ಹೊಸ ಪ್ರೈವೆಸಿ ಪಾಲಿಸಿ ಜಾರಿಗೆ ತಂದಿತ್ತು. ಅದರಂತೆ ಫೆಬ್ರವರಿ 8ರ ಒಳಗಾಗಿ ಹೊಸ ನಿಯಮಕ್ಕೆ ಒಪ್ಪಿಗೆ ನೀಡದೇ ಹೋದ್ರೆ ಫೇಸ್​​ಬುಕ್ ಖಾತೆ ಡಿಲೀಟ್ ಆಗುತ್ತೆ ಅಂತ ಹೇಳಲಾಗಿತ್ತು. ಆದ್ರೆ ಈ ಪಾಲಿಸಿಗೆ ಒಪ್ಪಿಗೆ ನೀಡಿದ್ರೆ ಫೇಸ್​​ಬುಕ್ ಜೊತೆ ಮಾಹಿತಿ ಹಂಚಿಕೊಳ್ಳುತ್ತೆ ಅಂತ ಬಳಕೆದಾರರು ಆತಂಕವ್ಯಕ್ತಪಡಿಸಿದ್ರು. ಕೆಲ ಉದ್ಯಮಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ನಿನ್ನೆಯಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆ, ಫೆಬ್ರವರಿ 8ಕ್ಕೆ ಅಕೌಂಟ್ ಡಿಲೀಟ್ ಆಗಲ್ಲ. ಹೊಸ ನೀತಿ ಮತ್ತು ಸುರಕ್ಷತೆ ಬಗ್ಗೆ ರೂಮರ್ಸ್ ಹಬ್ಬಿದ್ದು, ಅದನ್ನು ತೆಗೆದುಹಾಕುವ ಕೆಲಸ ಮಾಡ್ತಿದ್ದೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply