masthmagaa.com:

ಕೊವಾಕ್ಸ್ ಲಸಿಕೆ ಯೋಜನೆಗೆ ಬದ್ಧವಾಗಿರುವ ಮತ್ತು ಕೊರೋನಾ ಲಸಿಕೆಯನ್ನು ಜಾಗತಿಕ ಸರಕು ಅಂತ ಪರಿಗಣಿಸಿರುವ ಭಾರತಕ್ಕೆ ಮತ್ತು ಪ್ರಧಾನಿ ಮೋದಿಗೆ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ತಿಳಿಸಿದೆ. ಈ ಸಂಬಂಧ ಪ್ರಧಾನಿ ಮೋದಿ ಜೊತೆ ದೂರವಾಣಿ ಮೂಲಕ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧನಾಮ್, ‘ಕೊರೋನಾ ಸೋಂಕು ಜಗತ್ತಿಗೆ ಎದುರಾಗಿರುವ ಅನಿರೀಕ್ಷಿತ ಸವಾಲಾಗಿದೆ. ಕೊರೋನಾ ವಿರುದ್ಧದ ಹೋರಾಟ, ಲಸಿಕೆ ತಯಾರಿಕೆ ಹಾಗೂ ಇತರ ದೇಶಗಳಿಗೆ ಪೂರೈಕೆ ಮಾಡಲು ಬದ್ಧವಾಗಿರುವ ಭಾರತ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ. ಕೊರೋನಾ ವಿರುದ್ಧ ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ನಾವು ಬದ್ಧವಾಗಿದ್ದೇವೆʼ ಅಂತ ಹೇಳಿದ್ದಾರೆ.

ಅಂದ್ಹಾಗೆ ಕೊರೋನಾ ಸೋಂಕಿಗೆ ಲಸಿಕೆ ಸಿಕ್ಕ ಬಳಿಕ ಅದನ್ನ ಬಡ ದೇಶಗಳಿಗೂ ಲಭ್ಯವಾಗುವಂತೆ ಮಾಡಲು ಗವಿ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೇರಿಕೊಂಡು COVAX ಮೈತ್ರಿಕೂಟವನ್ನ ರಚಿಸಿಕೊಂಡಿವೆ. ಇದಕ್ಕೆ ಈಗಾಗಲೇ ಹಲವು ದೇಶಗಳು ಸಹಿ ಹಾಕಿವೆ. ಇದೀಗ ಭಾರತ ಕೂಡ ಇದಕ್ಕೆ ಬದ್ಧವಾಗಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸುರಕ್ಷಿತ ಕೊರೋನಾ ಲಸಿಕೆ ಸಿಕ್ಕ ಬಳಿಕ ಅದನ್ನ ಮೈತ್ರಿಕೂಟದಲ್ಲಿರುವ ಮತ್ತು ಬಡ ದೇಶಗಳಿಗೆ ಪೂರೈಸೋದು ಇದರ ಉದ್ದೇಶ. ಒಂದ್ವೇಳೆ ಮೈತ್ರಿಕೂಟದಲ್ಲಿರುವ ದೇಶವೇ ಕೊರೋನಾಗೆ ಲಸಿಕೆ ಕಂಡುಹಿಡಿದರೆ ಅದನ್ನ ಇತರ ದೇಶಗಳಿಗೂ ಪೂರೈಸಲು  ಬದ್ಧವಾಗಿರಬೇಕು.

-masthmagaa.com

Contact Us for Advertisement

Leave a Reply