ಗಡಿಯಲ್ಲಿ ಭಾರತಕ್ಕೆ ಯಶಸ್ಸು: ಚೀನಾ ಸೇನೆ ವಿರುದ್ಧ ಜಿನ್​ಪಿಂಗ್ ಸಿಟ್ಟು

masthmagaa.com:

ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ವಾಸ್ತವ ನಿಯಂತ್ರಣ ರೇಖೆ (LAC) ಬಳಿ ಭಾರತೀಯ ಸೇನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಿಂದ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಕೆಂಡಾಮಂಡಲರಾಗಿದ್ದಾರೆ ಅಂತ ವರದಿಯಾಗಿದೆ.

ಅಂದು ರಾತ್ರಿ ಪ್ಯಾಂಗಾಂಗ್​ ಸೋ ಸರೋವರದ ದಕ್ಷಿಣ ಭಾಗ ಮತ್ತು ಲೇಕ್​ ಸ್ಪ್ಯಾಂಗೂರ್ ಭಾಗದಲ್ಲಿನ ಎತ್ತರದ ಪ್ರದೇಶಗಳನ್ನ ಚೀನಾ ಸೈನಿಕರಿಗಿಂತ ಮೊದಲೇ ತೆರಳಿ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದರು. ಈ ವೇಳೆ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆಯುವುದನ್ನು ತಪ್ಪಿಸಲು ಚೀನಾದ ಸ್ಥಳೀಯ ಸೇನಾ ನಾಯಕರು ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದರು. ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ಈ ವೈಫಲ್ಯ ಚೀನಾ ಅಧ್ಯಕ್ಷ ಜಿನ್​ಪಿಂಗ್​ ಅವರನ್ನ ಕೆರಳಿಸಿದೆ ಎನ್ನಲಾಗ್ತಿದೆ.

ಇದುವರೆಗೆ ಗಡಿ ಭಾಗದಲ್ಲಿ ಚೀನಾವೇ ಏನಾದರೂ ಕಿತಾಪತಿ ಮಾಡುತ್ತಿತ್ತು, ಅದಕ್ಕೆ ಭಾರತ ಪ್ರತಿಕ್ರಿಯೆ ನೀಡುತ್ತಿತ್ತು. ಆದ್ರೆ ಈ ಬಾರಿ ಭಾರತವೇ ಒಂದು ಹೆಜ್ಜೆ ಮುಂದೆ ಇಟ್ಟಿರೋದು ಚೀನಾಗೆ ದೊಡ್ಡ ಆಘಾತ ಕೊಟ್ಟಂತಾಗಿದೆ.

-masthmagaa.com

Contact Us for Advertisement

Leave a Reply