masthmagaa.com:
ಟಿಆರ್ಪಿ ತಿರುಚಿದ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ಟಿವಿಗೆ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಅಂತ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಜೊತೆಗೆ ‘ದೇಶದ ಬೇರೆ ನಾಗರಿಕರಂತೆ ಮೊದಲು ಬಾಂಬೆ ಹೈಕೋರ್ಟ್ಗೆ ಹೋಗಿ’ ಅಂತ ಸೂಚಿಸಿದೆ.
‘ನೀವು ಈಗಾಗಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೀರಿ. ಇಂತಹ ಸಂದರ್ಭದಲ್ಲಿ ಅರ್ಜಿಯನ್ನು ಸ್ವೀಕರಿಸಿದ್ರೆ ಹೈಕೋರ್ಟ್ ಮೇಲೆ ನಮಗೆ ನಂಬಿಕೆ ಇಲ್ಲ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಹೀಗಾಗಿ ಬೇರೆ ನಾಗರಿಕರಂತೆ ನೀವು ಕೂಡ ಮೊದಲು ಹೈಕೋರ್ಟ್ಗೆ ಹೋಗಿ’ ಅಂತ ಸುಪ್ರೀಂಕೋರ್ಟ್ ಹೇಳಿದೆ.
ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಅರ್ಜಿಗೆ ಮುಂಬೈ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ತನಿಖೆಗೆ ಅಡ್ಡಿಪಡಿಸಲು ಈ ರೀತಿ ಮಾಡಲಾಗುತ್ತಿದೆ ಅಂತ ಪೊಲೀಸರು ಆರೋಪಿಸಿದ್ದರು. ಅಂದ್ಹಾಗೆ ರಿಪಬ್ಲಿಕ್ ಟಿವಿ ಸೇರಿದಂತೆ ಒಟ್ಟು ಮೂರು ಟಿವಿ ಚಾನಲ್ಗಳ ವಿರುದ್ಧ ಟಿಆರ್ಪಿ ತಿರುಚಿದ ಆರೋಪವಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-masthmagaa.com
Contact Us for Advertisement