ವಿಶ್ವದ ಮೊದಲ ವಿಶೇಷಚೇತನ ಗಗನಯಾತ್ರಿ ಇವರೇ ನೋಡಿ!

masthmagaa.com:

ವಿಶ್ವದ ಮೊದಲ ವಿಶೇಷಚೇತನ ಗಗನಯಾತ್ರಿಯನ್ನ ಯುರೋಪ್‌ ಸ್ಪೇಸ್‌ ಏಜೆನ್ಸಿ (ESA) ಸೇರಿಸಿಕೊಂಡಿದೆ. ಮೊದಲ ಬಾರಿಗೆ ದೈಹಿಕ ವಿಕಲರಿಗೆ ಬಾಹ್ಯಾಕಾಶದಲ್ಲಿ ಕೆಲಸ ಮಾಡೋಕೆ ESA ಅವಕಾಶ ನೀಡಿದೆ. ಬ್ರಿಟನ್‌ನ ಪ್ಯಾರಾ ಓಲಿಂಪಿಕ್‌ ಓಟಗಾರ ಜಾನ್‌ ಮೆಕ್‌ಫಾಲ್‌ ಅವ್ರನ್ನ ನೇಮಿಸಲಾಗಿದೆ ಅಂತ ESA ಹೇಳಿದೆ. ವಿಶೇಷಚೇತನ ಗಗನಯಾತ್ರಿ ಅಥ್ವಾ ಪ್ಯಾರಾಸ್ಟ್ರೋನಾಟ್‌ಗೆ ಟ್ರೈನಿಂಗ್‌ ಕೊಡಲಾಗುವುದು. ಜೊತೆಗೆ ಯಾವ ರೀತಿಯ ಕಂಡೀಶನ್ಸ್‌ ಇದ್ರೆ ಪ್ಯಾರಾಸ್ಟ್ರೋನಾಟ್‌ಗಳನ್ನ ಮುಂದಿನ ಮಿಷನ್‌ಗಳಲ್ಲಿ ಸೇರಿಸಿಕೊಳ್ಬೋದು ಅನ್ನೋದ್ರ ಬಗ್ಗೆ ಅಧ್ಯಯನ ಮಾಡಲಾಗುವುದು ಅಂತ ಸಂಸ್ಥೆ ಹೇಳಿದೆ. ಸ್ಪೇಸ್‌ ಏಜೆನ್ಸಿಗಳಲ್ಲಿ ಕೆಲ್ಸ ಮಾಡೋಕೆ ಆಸಕ್ತಿ ಇದ್ದು ತಮ್ಮ ಅಂಗವಿಕಲತೆಯಿಂದ ಅವಕಾಶ ವಂಚಿತರಾಗಿದ್ದವ್ರಿಗೆ ಅವಕಾಶ ನೀಡೋಕೆ ESA ಅಪ್ಲಿಕೇಶನ್‌ ಹಾಕಲು ಕರೆದಿತ್ತು. ಈ ವೇಳೆ 257 ಅಪ್ಲಿಕೇಶನ್‌ಗಳು ಬಂದಿದ್ದು ಅದ್ರಲ್ಲಿ ಮೆಕ್‌ಫಾಲ್‌ ಆಯ್ಕೆಯಾಗಿದ್ದಾರೆ. ಹಾಗೂ ವಿಶೇಷಚೇತನರಿಗೆ ಬೇಕಾಗೋ ಹಾಗೆ ಹಾರ್ಡ್‌ವೇರ್‌ನಲ್ಲಿ ಯಾವ ರೀತಿ ಬದಲಾವಣೆ ಮಾಡ್ಬೇಕು, ಅನ್ನೋದ್ರ ಬಗ್ಗೆ ಸ್ಟಡಿ ಮಾಡಲು ಇವ್ರು ಸಂಸ್ಥೆಯ ಇಂಜಿನಿಯರ್‌ಗಳ ಜೊತೆ ಕೆಲಸ ಮಾಡಲಿದ್ದಾರೆ ಅಂತ ESA ತಿಳಿಸಿದೆ.

-masthmagaa.com

Contact Us for Advertisement

Leave a Reply