ರಾಜ್ಯದಲ್ಲಿ ʻಏಕರೂಪ ನಾಗರಿಕ ಸಂಹಿತೆʼ ತರೋದಾಗಿ ಸಿಎಂ ಭರವಸೆ!

masthmagaa.com:

ರಾಜ್ಯದಲ್ಲಿ ʻಏಕರೂಪ ನಾಗರಿಕ ಸಂಹಿತೆʼ (UCC) ಜಾರಿಗೊಳಿಸೋಕೆ ಸರ್ಕಾರ ನಿರ್ಧರಿಸಿದೆ. ಯಾವ ರೀತಿ ಹಾಗೂ ಹೇಗೆ ಜಾರಿ ಮಾಡಬೇಕು ಅನ್ನೊದ್ರ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾರ್ಯಕ್ರಮ ಒಂದ್ರಲ್ಲಿ ಈ ಬಗ್ಗೆ ಮಾತಾಡಿದ ಬೊಮ್ಮಾಯಿ, ʻಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿರೊ ಸಮಾನತೆಯ ಆಶಯವನ್ನ ಕಾರ್ಯರೂಪಕ್ಕೆ ತರೋಕೆ UCC ಅವಶ್ಯಕತೆ ಬಗ್ಗೆ ದೀನದಯಾಳ್‌ ಉಪಾದ್ಯಾಯ ಅವರ ಕಾಲದಿಂದಲೂ ಬಿಜೆಪಿ ಹೇಳ್ತಾ ಬಂದಿದೆ. ಅದರ ಬಗ್ಗೆ ಈಗ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಚರ್ಚೆ ನಡೀತಾಯಿವೆ. ಏಕರೂಪ ನಾಗರಿಕ ಸಂಹಿತೆಯನ್ನ ರಾಜ್ಯದಲ್ಲಿ ಸಕಾಲಕ್ಕೆ ಜಾರಿಗೊಳಿಸೊ ಉದ್ದೇಶವಿದೆ. ಜನರ ಕಲ್ಯಾಣಕ್ಕಾಗಿ ಅದನ್ನ ಆಚರಣೆಗೆ ತರಲು ನಾವು ದಿಟ್ಟ ಕ್ರಮ ಕೈಗೊಳ್ಳಲಿದ್ದೇವೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ದವಾಗಿದೆ. ಎಲ್ಲ ಪ್ರಕ್ರಿಯೆಗಳನ್ನ ಅನುಸರಿಸಿ, ಎಲ್ಲರ ಜೊತೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುತ್ತೆ ಅಂತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ರು. ಈ ಏಕರೂಪ ನಾಗರಿಕ ಸಂಹಿತೆ ಅಂದ್ರೆ ವಿವಾಹ, ದತ್ತು ಹಾಗೂ ವಿಚ್ಚೇಧನಕ್ಕೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಒಂದೇ ಕಾನೂನು ಅನ್ವಯ ಮಾಡೋದು. ಅಂದ್ಹಾಗೆ ಈ ಏಕರೂಪ ನಾಗರಿಕ ಸಂಹಿತೆ ಅಂದ್ರೇನು ಅನ್ನೋ ಬಗ್ಗೆ ನಾವು ಈ ಮುಂಚೆಯೇ ವರದಿ ಪ್ರಕಟ ಮಾಡಿದ್ದೀವಿ ನೀವು ಅದನ್ನೂ ಚೆಕ್‌ ಮಾಡ್ಬೋದು.

-masthmagaa.com

Contact Us for Advertisement

Leave a Reply