ಜಗತ್ತಿನಲ್ಲಿ ಅತಿಹೆಚ್ಚು ಶ್ರಮವಹಿಸಿ ಕೆಲಸ ಮಾಡುವ ಅಧಕಾರಿಗಳು ಯಾವ ದೇಶದವರು?

masthmagaa.com:

ಅಮೆರಿಕ, ಯುಕೆ ಹಾಗೂ ಚೀನಾ ದೇಶದ ಅಧಿಕಾರಿಗಳಿಗಿಂತ ಫ್ರಾನ್ಸ್‌ನಲ್ಲಿರೊ ಅಧಿಕಾರಿಗಳು ಅಧಿಕ ಹಾರ್ಡ್‌ವರ್ಕ್‌ ಅಂದ್ರೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡ್ತಾರೆ ಅಂತ ಇತ್ತೀಚಿನ ಸಮೀಕ್ಷೆ ಒಂದ್ರಿಂದ ತಿಳಿದು ಬಂದಿದೆ. 10 ರಲ್ಲಿ 4 ಫ್ರೆಂಚ್‌ ಬ್ಯುಸಿನೆಸ್‌ ಮ್ಯಾನ್‌ಗಳು, ಹೆಚ್ಚಿನ ಬ್ರೇಕ್‌ ತೆಗೆದುಕೊಳ್ಳದೇ ಇಂಟೆನ್ಸ್‌ ಆಗಿ ದೀರ್ಘ ಸಮಯದವರೆಗೆ ಕೆಲಸ ಮಾಡ್ತಿದಾರೆ ಅಂತ ಹೇಳಲಾಗಿದೆ. ಇದು ಜಾಗತಿಕ ಸರಾಸರಿಗಿಂತ 25% ಹೆಚ್ಚಾಗಿದ್ದು, ಅಮೆರಿಕ, ಯುಕೆ ಹಾಗೂ ಚೀನಾದ ವರ್ಕ್‌ ರೇಟ್‌ಗಿಂತ ಅಧಿಕವಾಗಿದೆ ಅಂತ ಸರ್ವೇಯಲ್ಲಿ ತಿಳಿದುಬಂದಿದೆ. ಈ ಸರ್ವೇಯನ್ನ ಬ್ರಿಟಿಷ್‌ ಮೂಲದ ಹೆಲ್ತ್ ಇನ್ಶುರೆನ್ಸ್‌ ಸಂಸ್ಥೆಯಾದ ಬುಪಾ ಗ್ಲೋಬಲ್‌ ಮಾಡಿದೆ. ಜೊತೆಗೆ ಫ್ರೆಂಚ್‌ ಅಧಿಕಾರಿಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಸಂಧರ್ಭದಲ್ಲಿ ತಮ್ಮ ಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ಕಳವಳ ಹೊಂದಿದ್ದಾರೆ. ರಿಮೋರ್ಟ್‌ ವರ್ಕ್‌ ಅಂದ್ರೆ ಆಫೀಸ್‌ಗೆ ಹೋಗದೇ ಕೆಲಸ ಮಾಡೋದನ್ನ ಹೆಚ್ಚಿನ ಫ್ರೆಂಚ್‌ ಅಧಿಕಾರಿಗಳು ಇಷ್ಟಪಡಲ್ಲ ಅಂತಾನೂ ಈ ಸರ್ವೇಯಿಂದ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply