ದಿಗ್ವಿಜಯ ಸಿಂಗ್‌ ಹೇಳಿಕೆ ಒಪ್ಪಲ್ಲ, ಸೇನೆಯ ಮೇಲೆ ಸಂಪೂರ್ಣ ನಂಬಿಕೆ ಇದೆ: ರಾಹುಲ್‌ ಗಾಂಧಿ

masthmagaa.com:

ಸೇನೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ಗಳ ಬಗ್ಗೆ ನಮಗೆ ಆಧಾರ ಬೇಕು ಅಂತ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ವಿರುದ್ದ ಗೋವಾದ ಉತ್ಪಾಲ್‌ ಪರಿಕ್ಕರ್ ಕಿಡಿಕಾರಿದ್ದಾರೆ. ಒಸಮಾನನ್ನ ʻಒಸಮಾ ಜಿʼ ಅಂತ ಕರೆದ ದಿಗ್ವಿಜಯ ಅವರ ಬಾಯಿಂದ ಇಂಥ ಹೇಳಿಕೆಗಳು ಬಂದಿರೋದೇನು ಆಶ್ವರ್ಯ ಅಲ್ಲ ಅಂತ ಹೇಳಿದ್ದಾರೆ. ಇನ್ನು ದಿಗ್ವಿಜಯ ಸಿಂಗ್‌ರ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿತ್ತು. ಇದೀಗ ಮತ್ತೆ, ಅವರು ನೀಡಿರೋ ಹೇಳಿಕೆಯನ್ನ ಕಾಂಗ್ರೆಸ್‌ ಒಪ್ಪಲ್ಲ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ನಮ್ಮ ಸೇನೆ ಏನೇ ಮಾಡಿದರೂ ಅದಕ್ಕೆ ಪುರಾವೆ ಬೇಕಿಲ್ಲ. ದಿಗ್ವಿಜಯ್ ಸಿಂಗ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್ ಮತ್ತು ನಾನು ಅದನ್ನ ಒಪ್ಪಲ್ಲ. ಸೇನೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ. ದಿಗ್ವಿಜಯ ಸಿಂಗ್ ಹೇಳಿಕೆ ಬಳಿಕ ಕಾಂಗ್ರೆಸ್ ವಿರುದ್ಧ ತುಂಬಾ ಟೀಕೆಗಳು ವ್ಯಕ್ತವಾಗಿದ್ದವು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿ ತಮಗೆ ಪಪ್ಪು ಅಂತ ಕರೆಯೋ ಬಗ್ಗೆ ಕೇಳಿದಾಗ, ಬಿಜೆಪಿ ಹಾಗೂ RSS ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನನ್ನ ಇಮೇಜ್‌ನ್ನ ಹಾಳು ಮಾಡೋಕೆ ಪ್ರಯತ್ನಿಸಿವೆ. ಆದರೆ ಕೊನೆಯಲ್ಲಿ ಸತ್ಯ ಹೊರಬರುತ್ತೆ. ದೇಶದಲ್ಲಿ ಹಣ ಅಲ್ಲ ಸತ್ಯ ನಡೆಯುತ್ತೆ ಅನ್ನೊದನ್ನ ಬಿಜೆಪಿಗೆ ಕಾಂಗ್ರೆಸ್‌ ಕಲಿಸುತ್ತೆ ಅಂತ ರಾಹುಲ್‌ ಗಾಂಧಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply