ಮಧ್ಯಪಾನ ಮಾಡಿ ಶಾಲೆಗೆ ಬಂದು ಮಕ್ಕಳಿಗೆ ರಜೆ ಘೋಷಿಸಿದ ಶಿಕ್ಷಕ!

masthmagaa.com:

ಬಿಹಾರದ ಸರ್ಕಾರಿ ಶಾಲೆ ಒಂದ್ರಲ್ಲಿ ಶಿಕ್ಷಕನೊಬ್ಬ ಮಧ್ಯಪಾನ ಮಾಡಿ ಶಾಲೆಗೆ ಬಂದು ಸುಖಾಸುಮ್ಮನೆ ಇಡೀ ಶಾಲೆಗೆ ರಜೆ ಘೋಷಿಸಿದ್ದಾನೆ. ಬಿಹಾರ ಒಂದು ಡ್ರೈ ಸ್ಟೇಟ್‌.. ಅಲ್ಲಿ ಮಧ್ಯಪಾನ ನಿಷೇಧ ಆಗಿದೆ. ಆದ್ರೆ ಈತ ಅದೆಲ್ಲಿಂದ ಮಧ್ಯ ಸೇವನೆ ಮಾಡಿ ಬಂದ್ನೋ ಗೊತ್ತಿಲ್ಲ.. ಮಕ್ಕಳನ್ನೆಲ್ಲಾ ಮನೆಗೋಗಿ ಅಂತ ಕಳಿಸಿದ್ದಾನೆ. ಕೂಡಲೇ ಊರಿನ ಜನರೆಲ್ಲಾ ಬಂದು ಈತನನ್ನ ಕಟ್ಟಿ, ಪೊಲೀಸ್‌ ಠಾಣೆಗೆ ತಲುಪಿಸಿದ್ದಾರೆ. ನಂತರ ಈತನನ್ನ ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡಿ ದಂಡ ಕಟ್ಟಿಸಲಾಗಿದೆ. ಈತನ ನಾಮಧೇಯ ರವಿ ಶಂಕರ್‌ ಭಾರ್ತೀ ಅಂತ.. ಬಿಹಾರದ ನೌಹಟ್ಟಾ ಪ್ರದೇಶದ ರೋಹ್ತಾಸ್‌ನ ಶಾಲೆಯಲ್ಲಿ ಈ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply