masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದ್ದು, ಇಂದು ಮತ್ತೆ ದಾಖಲೆಯ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಮಂದಿಗೆ ಸೋಂಕು ತಗುಲಿದ್ದು, 1,201 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 46 ಲಕ್ಷದ ಗಡಿ ದಾಟಿದ್ದು 46,59,984 ಆಗಿದೆ. ಅದೇ ರೀತಿ ಮೃತರ ಸಂಖ್ಯೆ 77,472ಕ್ಕೆ ಏರಿಕೆಯಾಗಿದೆ. ಈವರೆಗೆ 36,24,196 ಮಂದಿ ಗುಣಮುಖರಾಗಿದ್ದು, ಇನ್ನೂ ಕೂಡ 9,58,316 ಮಂದಿ ಸೋಂಕಿತರು ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply