ಬಿಹಾರ್‌ ಫ್ರಾಡ್‌ ಕೇಸ್‌: ಪ್ರೆಗ್ನೆಂಟ್‌ ಮಾಡಿದ್ರೆ 13 ಲಕ್ಷ ಆಫರ್‌!

masthmagaa.com:

ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆಗಳು ಜಾಸ್ತಿಯಾಗೋದು ಮಾತ್ರವಲ್ದೇ, ಕ್ರಿಯೇಟಿವ್‌ ಕೂಡ ಆಗ್ತಿವೆ. ಜನರಿಗೆ ಯಾವ್ಯಾವ ರೀತಿಯಲೆಲ್ಲಾ ಟೋಪಿ ಹಾಕ್ಬೋದೋ, ಆ ಎಲ್ಲಾ ರೀತಿಯಲ್ಲಿ ವಂಚಕರು ಮೋಸ ಮಾಡೋಕೆ ಟ್ರೈ ಮಾಡೋದನ್ನ ಕಂಟಿನ್ಯೂ ಮಾಡ್ತಿರ್ತಾರೆ. ಇದೀಗ ಬಿಹಾರದಲ್ಲಿ ಸೈಬರ್‌ ವಂಚಕರು ಡಿಫರೆಂಟ್‌ ಆಗಿ ಜನರಿಗೆ ಮೋಸದ ಬಲೆ ಬೀಸೋಕೆ ಸ್ಕೆಚ್‌ ಹಾಕಿದ್ದಾರೆ. ಅದೇನಂದ್ರೆ, ಗರ್ಭ ಧರಿಸೋಕೆ ಆಗದೇ ಇರೋ ಮಹಿಳೆಯರನ್ನ ಅದ್ಯಾವ ಮಹಾಶಯ ಬಸಿರು ಮಾಡ್ತಾನೋ, ಆತನಿಗೆ ಬರೋಬ್ಬರೀ 13 ಲಕ್ಷ ರೂಪಾಯಿ ನೀಡಲಾಗುತ್ತೆ. ಹೀಗಂತ ಬಿಹಾರ್‌ನ ನವಾದ ಜಿಲ್ಲೆಯ ʻಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಏಜೆನ್ಸಿʼ ಅಫರ್‌ ಮಾಡಿದೆ. ಇಷ್ಟು ಮಾತ್ರವಲ್ದೇ ಈ ಗನಂಧಾರಿ ಕೆಲ್ಸಕ್ಕೆ 799 ರೆಜಿಸ್ಟ್ರೇಷನ್‌ ಫೀಸ್‌ ಬೇರೆ ಫಿಕ್ಸ್‌ ಮಾಡಿದ್ದಾರೆ. ಒಮ್ಮೆ, ಆಯ್ತಪ್ಪ ಈ ಕೆಲ್ಸ ಮಾಡೋಕೆ ನಾನು ರೆಡಿ ಇದ್ದೀನಿ ಅಂತ ರೆಜಿಸ್ಟ್ರೇಷನ್‌ ಮಾಡ್ಕೊಂಡ್ರೆ, ಈ ಫ್ರಾಡ್‌ ಏಜೆನ್ಸಿಯವ್ರು ಹಲವಾರು ಮಹಿಳೆಯರ ಫೋಟೋಗಳನ್ನ ಕಳಿಸ್ತಾರೆ. ನಂತರ ಇವ್ರಲ್ಲಿ ನಿಮ್ಗೇ ಯಾರ್‌ ಓಕೇನೋ ಅವ್ರನ್ನ ಸೆಲೆಕ್ಟ್‌ ಮಾಡಿದ್ರೆ, ಪ್ರೆಗ್ನೆಂಟ್‌ ಮಾಡೋಕೆ ಗ್ರೀನ್‌ ಸಿಗ್ನಲ್‌ ಸಿಗುತ್ತೆ. ಇನ್ನು ಸೆಲೆಕ್ಷನ್‌ ಪ್ರಾಸೆಸ್‌ ಆದ್ಮೇಲೆ, ಸೆಕ್ಯುರಿಟಿ ಡಪಾಸಿಟ್‌ ಬೇರೆ ಮಾಡೋದಕ್ಕಿದೆ. ಸುಮಾರು 5,000 ಇಂದ 20,000 ವರೆಗೆ ಹಣ ಡೆಪಾಸಿಟ್‌ ಮಾಡ್ಬೇಕು. ಇನ್ನು ಈ ರೇಂಜ್‌ ಒಳಗೆ ನೀವೆಷ್ಟು ಡೆಪೋಸಿಟ್‌ ನೀಡ್ಬೇಕು ಅನ್ನೋದು, ಕಂಪ್ಲೀಟ್‌ ಆಗಿ ಸೆಲೆಕ್ಟ್‌ ಮಾಡಿರೋ ಮಹಿಳೆಯ ಮೇಲೆ ಡಿಪೆಂಡ್‌ ಆಗಿರುತ್ತೆ. ಅಂದ್ರೆ ಮಹಿಳೆ ಸುಂದರವಾಗಿದ್ರೆ ಸ್ವಲ್ಪ ಜಾಸ್ತಿ ಡೆಪೋಸಿಟ್‌ ಇಲ್ಲವಾದ್ರೆ ಕಡಿಮೆ. ಅಂತಿಮವಾಗಿ, ಯಾರು ಮಹಿಳೆಯನ್ನ ಪ್ರೆಗ್ನಂಟ್‌ ಮಾಡೋದ್ರಲ್ಲಿ ಯಶಸ್ವಿಯಾಗ್ತಾರೋ, ಅವ್ರ ಅಕೌಂಟ್‌ಗೆ 13 ಲಕ್ಷ ಬಂದು ಬೀಳುತ್ತೆ. ಆದ್ರೆ ಯಾರ ಕೈಯಿಂದ ಆಗಿಲ್ವೋ, ಅವರಿಗೆ ಸಮಧಾನಕರ ಬಹುಮಾನವಾಗಿ 5 ಲಕ್ಷವಂತೂ ಪಕ್ಕ ಸಿಗುತ್ತೆ. ಹೀಗಂತ ಈ All India Pregnant Job Agency ಮೋಸ ಹೋಗೋರಿಗೆ ಹೊಸತಾಗಿ ಜಾಬ್‌ ಆಫರ್‌ ಮಾಡಿದೆ. ಈ ಬಗ್ಗೆ ಮಾಹಿತಿ ಪಡೆದ ಬಿಹಾರ್‌ ಪೊಲೀಸ್‌ ಈ ಗ್ಯಾಂಗ್‌ಗೆ ಬಲೆ ಬೀಸಿ, ಇದ್ರಲ್ಲಿ ಇನ್ವಾಲ್ವ್‌ ಆಗಿರೋ 8 ಮಂದಿಯನ್ನ ಅರೆಸ್ಟ್‌ ಮಾಡಿದ್ದಾರೆ. ಜೊತೆಗೆ ಇವ್ರಿಗೆ ಸೇರಿದ್ದ 9 ಮೊಬೈಲ್‌ ಫೋನ್‌ಗಳು, 2 ಪ್ರಿಂಟರ್ಸ್‌ ಮತ್ತು ಹಲವು ಡೇಟಾ ಶೀಟ್‌ಗಳನ್ನ ವಶಪಡಿಸಿಕೊಂಡಿದ್ದಾರೆ. ಆದ್ರೆ ಈ ವಂಚನೆಯ ಕಿಂಗ್‌ಪಿನ್‌ ಆಗಿರೋ ಮುನ್ನಾ ಕುಮಾರ್‌ ಮಾತ್ರ ಪೊಲೀಸರಿಂದ ಎಸ್ಕೇಪ್‌ ಆಗಿದ್ದಾನೆ.

-masthmagaa.com

Contact Us for Advertisement

Leave a Reply