ಇಸ್ರೇಲ್‌ಗೆ ಸಂಬಂಧಿಸಿದ ಹಡಗಿನ ಮೇಲೆ ಡ್ರೋನ್‌ ದಾಳಿ!

masthmagaa.com:

ಅರಬ್ಬೀ ಸಮುದ್ರದಲ್ಲಿ ಡ್ರೋನ್‌ ದಾಳಿಯಿಂದಾಗಿ ಇಸ್ರೇಲ್‌ ಸಂಬಂಧಿತ ವ್ಯಾಪಾರಿ ಹಡಗಿಗೆ ಬೆಂಕಿ ಹತ್ತಿದ್ದ ವಿಚಾರ ಇದೀಗ ವರದಿಯಾಗಿದೆ. ಗುಜರಾತ್‌ನ ವೆರಾವಲ್‌ನಿಂದ 200 ಕಿಲೋಮೀಟರ್‌ ದೂರದಲ್ಲಿ ಈ ದಾಳಿ ನಡೆದಿದೆ. ಲೈಬೀರಿಯಾ ದೇಶದ ರಾಸಾಯನಿಕ ಸಾಮಗ್ರಿಗಳನ್ನ ಸಾಗಿಸ್ತಿದ್ದ ಟ್ಯಾಂಕರ್‌ಗೆ ಬೆಂಕಿ ತಗುಲಿದೆ. ಆದ್ರೆ ಇದ್ರಿಂದ ಯಾವ್ದೇ ರೀತಿ ಪ್ರಾಣ ಹಾನಿ ಸಂಭವಿಸಿಲ್ಲ ಅಂತ ಹಡಗಿನ ಸಹಾಯಕ್ಕೆ ಬಂದು ಬೆಂಕಿ ನಂದಿಸಿದ ಬ್ರಿಟಿಷ್‌ ಕಡಲ ಭದ್ರತಾ ಸಂಸ್ಥೆ Ambrey ತಿಳಿಸಿದೆ. ʻಈ ಹಡಗಿಗೆ ಕೆಲ ಡ್ಯಾಮೇಜ್‌ಗಳಾಗಿದ್ದು, ನೀರು ಒಳಗೆ ನುಗ್ಗಿದೆ. ಇಸ್ರೇಲ್‌ಗೆ ಲಿಂಕ್‌ ಹೊಂದಿರೋ ಈ ಹಡಗು ಸೌದಿ ಅರೇಬಿಯಾದಿಂದ ಭಾರತದ ಕಡೆ ಪ್ರಯಾಣ ಬೆಳೆಸಿತ್ತು. 20 ಭಾರತೀಯರು ಸೇರಿ ಇದ್ರಲ್ಲಿರೋ ಎಲ್ಲಾ ಸಿಬ್ಬಂದಿ ಸೇಫ್‌ ಆಗಿದ್ದಾರೆʼ ಅಂತ ಹೇಳಿದೆ. ಅಂದ್ಹಾಗೆ ಕೆಂಪು ಸಮುದ್ರದಲ್ಲಿ ಯೆಮೆನ್‌ ಹೌತಿಗಳು ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳು ಹೆಚ್ಚಾಗ್ತಿವೆ. ಈ ದಾಳಿಯಲ್ಲೂ ಹೌತಿ ಕೈವಾಡ ಇದೆ ಅಂತ ಶಂಕಿಸಲಾಗ್ತಿದೆ.

-masthmagaa.com

Contact Us for Advertisement

Leave a Reply