ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಗೆ ಇನ್ಮುಂದೆ ‘Z’ Category ಭದ್ರತೆ!

masthmagaa.com:

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಭದ್ರತೆಯನ್ನು ‘Z’ Category ಗೆ ಅಪ್‌ಗ್ರೇಡ್‌ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮೂಲಗಳ ಪ್ರಕಾರ ಈ ಹಿಂದೆ ಜೈಶಂಕರ್‌ ಅವರಿಗೆ ʼY’ Category ಭದ್ರತೆಯನ್ನು ನೀಡಲಾಗಿತ್ತು. ಆದ್ರೆ ಈಗ ಒಟ್ಟು 36 ಸೆಕ್ಯುರಿಟಿ ಗಾರ್ಡ್‌ಗಳನ್ನು ಜೈಶಂಕರ್‌ ‘Z’ Category ಭದ್ರತೆಯಲ್ಲಿ ನಿಯೋಜಿಸಲಾಗುತ್ತದೆ. ಇದರೊಂದಿಗೆ 12 ಸಶಸ್ತ್ರ ಸ್ಟ್ಯಾಟಿಕ್‌ ಗಾರ್ಡ್‌ಗಳನ್ನು ಕೇಂದ್ರ ಸಚಿವರ ನಿವಾಸದಲ್ಲೂ ನಿಯೋಜಿಸಲಾಗುತ್ತದೆ ಎನ್ನಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಜೈಶಂಕರ್‌ ಸೇರಿದಂತೆ ಕೆನಡಾದಲ್ಲಿರುವ ಭಾರತದ ರಾಯಭಾರಿ ಅಧಿಕಾರಿಗಳಿಗೆ ಖಲಿಸ್ತಾನಿ ಉಗ್ರರಿಂದ ಜೀವಬೆದರಿಕೆ ಹಾಕಲಾಗಿತ್ತು.

-masthmagaa.com

Contact Us for Advertisement

Leave a Reply