ಬೆಟ್ಟಿಂಗ್‌ ಮೇಕರ್‌ಗಳಿಗೆ ಜಾಕ್‌ಪಾಟ್‌ ನೀಡಿದ ಫಿಫಾ ವಿಶ್ವಕಪ್‌ 2022!

masthmagaa.com:

ಕತಾರ್‌ನಲ್ಲಿ ನಡಿತಿರೊ ಫಿಫಾ ವಿಶ್ವಕಪ್‌, ಬೆಟ್ಟಿಂಗ್‌ ಮೇಕರ್‌ಗಳಿಗೆ ಜಾಕ್‌ಪಾಟ್‌ ನೀಡಿದೆ. ಪಂದ್ಯಗಳ ಮೇಲೆ ಒಟ್ಟು 35 ಬಿಲಿಯನ್‌ ಡಾಲರ್‌ ಅಂದ್ರೆ 2.87 ಲಕ್ಷ ಕೋಟಿ ರೂಪಾಯಿಯಷ್ಟು ಬೆಟ್ಟಿಂಗ್‌ ನಡೆದಿದೆ ಅಂತ ಲಂಡನ್‌ನ ಬಾರ್‌ಕ್ಲೇಸ್‌ ಬ್ಯಾಂಕ್ ಹೇಳಿದೆ. ಇದು ಕಳೆದ ವಿಶ್ವಕಪ್‌ಗೆ ಹೋಲಿಸದ್ರೆ 65% ಹೆಚ್ಚಳ ಕಂಡಿದೆ ಎನ್ನಲಾಗಿದೆ. ಲಾಕ್‌ಡೌನ್‌ಗಳಿಂದ ನಿಂತಿದ್ದ gambling industry ಅಂದ್ರೆ ಜೂಜಿನ ಉದ್ಯಮದ ಬೆಳವಣಿಗೆಗೆ ಎಕ್ಸ್‌ಟ್ರಾ ಬೂಸ್ಟ್‌ ಕೊಟ್ಟಂತಾಗಿದೆ ಅಂತ ವಿಶ್ಲೇಷಕ, ಜೇಮ್ಸ್‌ ರೋಲ್ಯಾಂಡ್‌ ಕ್ಲರ್ಕ್‌ ಹೇಳಿದ್ದಾರೆ. ಇನ್ನು ನಿನ್ನೆ ನಡೆದ ಮ್ಯಾಚ್‌ಗಳ ವಿವರ ನೋಡೋದಾದ್ರೆ, ಸ್ಪೇನ್‌ – ಜರ್ಮನಿ ಹಾಗೂ ಕ್ಯಾಮರೂನ್‌ – ಸರ್ಬಿಯಾ ನಡುವೆ ನಡೆದ ಪಂದ್ಯಗಳು ಡ್ರಾ ಆಗಿವೆ. ಇತ್ತ ದಕ್ಷಿಣ ಕೊರಿಯಾ ಎದುರು 1 ಗೋಲಿನ ಅಂತರದಿಂದ ಘಾನಾ ಗೆದ್ರೆ, ಸ್ವಿಜರ್‌ಲ್ಯಾಂಡ್‌ ವಿರುದ್ದ ಬ್ರೆಜಿಲ್‌ ಕೂಡ 1-0 ಅಂತರದಿಂದ ಗೆಲುವನ್ನ ತನ್ನದಾಗಿಸಿಕೊಂಡಿದೆ.

-masthmagaa.com

Contact Us for Advertisement

Leave a Reply