ವಯಸ್ಸಾದವ್ರು ಮತ್ತೆ ಯಂಗ್‌ ಆಗಬಹುದು! ಯಂಗ್‌ ಆಗೋಕೆ ಔಷಧಿ ಸಿಕ್ತು!

masthmagaa.com:

ಜನರು ವಯಸ್ಸಾಗದಂತೆ ಕಾಣೋಕೆ ಹಲವು ದಾರಿಗಳ ಮೊರೆ ಹೋಗ್ತಾರೆ. ಕೆಲವರು ಕಾಸ್ಮೆಟಿಕ್ಸ್‌ ಬಳಸಿದ್ರೆ, ಕೆಲವರು ಆಂಟಿ ಏಜಿಂಗ್‌ ಟ್ಯಾಬ್ಲೆಟ್‌ಗಳನ್ನ ಬಳಸ್ತಾರೆ. ಇದೀಗ ಇಂಥವರಿಗೆಲ್ಲ ಒಳ್ಳೆ ಸುದ್ದಿ ಸಿಕ್ಕಿದೆ. ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನ ತಜ್ಞರ ತಂಡವೊಂದು ಔಷಧವೊಂದನ್ನ ಕಂಡುಹಿಡಿದಿದ್ದಾರೆ. ಇದು ಕೇವಲ ಒಂದು ವಾರದಲ್ಲಿ ಏಜಿಂಗ್‌ ಪ್ರಾಸೆಸ್‌ನ್ನ ರಿವರ್ಸ್‌ ಮಾಡುತ್ತೆ. ಅಂದ್ರೆ ನೀವು ಯಂಗ್‌ ಆಗೋಕೆ ಸ್ಟಾರ್ಟ್‌ ಆಗ್ತೀರ. ಈ ಅಧ್ಯಯನವನ್ನ ಇಲಿಯ ಮೇಲೆ ಟೆಸ್ಟ್‌ ಮಾಡಲಾಗಿದೆ. ಈ ಔಷಧವನ್ನ ಮೂರು ಬೇರೆ ಬೇರೆ ಮೆಡಿಸಿನ್‌ಗಳನ್ನ ಬಳಸಿ ತಯಾರಿಸಲಾಗಿದೆ. ಈ ಔಷಧಿ, ದೇಹದಲ್ಲಿ ವಯಸ್ಸಾಗಿರೋ ಮಸಲ್‌ಗಳನ್ನ, ಲಿವರ್‌ ಟಿಶ್ಯುಗಳನ್ನ ಹಾಗೂ ಇತರ ಅಂಗಗಳಿಗೆ ಎನರ್ಜಿ ನೀಡಿ, ಮತ್ತೆ ಯಂಗ್‌ ಆಗಿ ಮಾಡುತ್ತೆ ಎನ್ನಲಾಗಿದೆ. ಇಲಿಗಳ ಆಪ್ಟಿಕ್‌ ನರ್ವ್‌, ಮೆದುಳಿನ ಟಿಶ್ಯುಗಳು, ಕಿಡ್ನಿಗಳಲ್ಲಿ ಒಳ್ಳೆಯ ರಿಸಲ್ಟ್‌ನ್ನ ತೋರಿಸಿದೆ. ಅಲ್ದೇ ದೃಷ್ಠಿಯನ್ನ ಇಮ್‌ಪ್ರೂವ್‌ ಮಾಡೋದಲ್ದೇ ಇಲಿಗಳ ಜೀವಿತಾವಧಿಯನ್ನ ಕೂಡ ಜಾಸ್ತಿಮಾಡಿದೆ ಅಂತ ಹಾರ್ವರ್ಡ್‌ನ ಸಂಶೋಧಕ ಡೇವಿಡ್‌ ಸಿನ್‌ಕ್ಲೇರ್‌ ಹೇಳಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಮಂಗಗಳ ಮೇಲೆ ಟೆಸ್ಟ್‌ ಮಾಡಲಾಗಿದ್ದು, ಅವುಗಳ ದೃಷ್ಠಿಯಲ್ಲು ಇಮ್‌ಪ್ರೂವ್‌ ಆಗಿದೆ ಎಂದಿದ್ದಾರೆ. ಈ ಬಗ್ಗೆ ಡೇವಿಡ್‌ ಸಿನ್‌ಕ್ಲೇರ್‌, ಟ್ವಿಟರ್‌ನಲ್ಲಿ ಹಾಗೂ ಮೆಡಿಕಲ್‌ ಜರ್ನಲ್ ʻಏಜಿಂಗ್‌ʼನಲ್ಲಿ ಶೇರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply