ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಹೀರಾಲಾಲ್ ಸಾಮರಿಯಾ ಪದಗ್ರಹಣ!

masthmagaa.com:

ಕೇಂದ್ರ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಹೀರಾಲಾಲ್ ಸಾಮರಿಯಾ ಅವ್ರು ಅಧಿಕಾರ ವಹಿಸಿಕೊಂಡಿದ್ದಾರೆ. ವೈಕೆ ಸಿನ್ಹಾ ಅವರ ಅಧಿಕಾರಾವಧಿ ಅಕ್ಟೋಬರ್ 3ರಂದು ಕೊನೆಗೊಂಡ ನಂತರ ಈ ಉನ್ನತ ಹುದ್ದೆ ಖಾಲಿಯಾಗಿತ್ತು. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಮೂಲಕ ಹೀರಾಲಾಲ್ ಸಾಮರಿಯಾ ಅವರು ದೇಶದ ಮೊದಲ ದಲಿತ ಮುಖ್ಯ ಮಾಹಿತಿ ಆಯುಕ್ತರು ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

-masthmagaa.com

Contact Us for Advertisement

Leave a Reply