ದಾಖಲೆಯ ತಾಪಮಾನ.. ಭೀಕರ ಕಾಡ್ಗಿಚ್ಚು.. ಕೆನಡಾ ಧಗಧಗ!

masthmagaa.com:

ಪಶ್ಚಿಮ ಕೆನಡಾ ಮತ್ತು ವಾಯುವ್ಯ ಅಮೆರಿಕದಲ್ಲಿ ದಾಖಲೆ ಮೇಲೆ ದಾಖಲೆ ಬರೀತಿರೋ ತಾಪಮಾನ ಇದೀಗ ಕಾಡ್ಗಿಚ್ಚಿಗೆ ಆಹ್ವಾನಕೊಟ್ಟಿದೆ. ಕೆನಡಾದ ಬ್ರಿಟೀಷ್ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್​ ನಗರದಲ್ಲಿ ಕಾಣಿಸಿಕೊಂಡು, ನಗರದ ಬಹುತೇಕ ಭಾಗವನ್ನ ಸುಟ್ಟುಹಾಕಿದೆ. ಮನೆ ಸೇರಿದಂತೆ ಇತರ ಕಟ್ಟಡಗಳು ಸುಟ್ಟು ಕರಕಲಾಗಿವೆ. ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಆದೇಶ ಹೊರಡಿಸಲಾಗಿದೆ. ಲಿಟ್ಟನ್​ ನಗರದಲ್ಲಿ ಮೊನ್ನೆ ಮಂಗಳವಾದ ದಾಖಲೆಯ 49.6 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿತ್ತು. ನಿನ್ನೆ ಪ್ರತಿಗಂಟೆಗೆ ಸುಮಾರು 70 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದೆ ಇದರ ಪರಿಣಾಮ ಕಾಡ್ಗಿಚ್ಚು ಮತ್ತಷ್ಟು ಉಗ್ರ ರೂಪ ಪಡೆದುಕೊಂಡಿದೆ. ಭೀಕರ ಕಾಡ್ಗಿಚ್ಚಿನಿಂದ ರಸ್ತೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ಲಿಟ್ಟನ್ ನಗರಕ್ಕೆ ರಸ್ತೆ ಸಂಪರ್ಕ ಸೀಮಿತಗೊಂಡಿದೆ. ಕಳೆದ 24 ಗಂಟೆಗಳಲ್ಲಿ 62ಕ್ಕೂ ಹೆಚ್ಚು ಹೊಸ ಕಾಡ್ಗಿಚ್ಚು ಪ್ರಕರಣ ವರದಿಯಾಗಿದೆ. ಕಾಡ್ಗಿಚ್ಚು ನಂದಿಸೋ ಪ್ರಯತ್ನಗಳು ನಡೀತಿವೆ. ಮತ್ತೊಂದುಕಡೆ ಬ್ರಿಟೀಷ್​ ಕೊಲಂಬಿಯಾ ಪ್ರಾಂತ್ಯದಲ್ಲಿ ಕಳೆದ 5 ದಿನದಲ್ಲಿ ಹೀಟ್​ವೇವ್​ಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 486ಕ್ಕೆ ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply