ಬ್ರೆಜಿಲ್​ ಮೀರಿಸಿದ ಭಾರತ, ಪರಿಸ್ಥಿತಿ ಗಂಭೀರ: ಕೊರೋನಾ ಬರೆದ ದಾಖಲೆಗಳಿವು

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 90,802 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು ಹೊಸ ದಾಖಲೆ ಬರೆದಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಇದುವರೆಗಿನ ಹೈಯೆಸ್ಟ್ ನಂಬರ್ ಇದು. ಸುಮಾರು 1 ತಿಂಗಳಿನಿಂದ ಪ್ರಪಂಚದಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣ ದೃಢಪಡುತ್ತಿರೋದು ಕೂಡ ಭಾರತದಲ್ಲಿ.

ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 42.04 ಲಕ್ಷ ದಾಟಿದೆ. ಇದರೊಂದಿಗೆ ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಬ್ರೆಜಿಲ್ ಮೀರಿಸಿರುವ ಭಾರತ 2ನೇ ಸ್ಥಾನಕ್ಕೆ ಬಂದಿದೆ. ಬ್ರೆಜಿಲ್​ನಲ್ಲಿ ಇದುವರೆಗೆ 41.37 ಲಕ್ಷ ಜನರಿಗೆ ಸೋಂಕು ತಗುಲಿದೆ. ಮೊದಲ ಸ್ಥಾನದಲ್ಲಿ 62 ಲಕ್ಷ ಪ್ರಕರಣಗಳೊಂದಿಗೆ ಅಮೆರಿಕ ಇದೆ. 

ಇನ್ನು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,016 ಸೋಂಕಿತರು ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 71,642 ಆಗಿದೆ. ಹೊಸದಾಗಿ 69,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 32.50 ಲಕ್ಷ ದಾಟಿದೆ. 8.82 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 77.31% ಇದ್ದು, ಸಾವಿನ ಪ್ರಮಾಣ 1.70% ಇದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 5ರವರೆಗೆ ದೇಶದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಕೊರೋನಾ ಪರೀಕ್ಷೆ ನಡೆಸಲಾಗ್ತಿತ್ತು. ಆದ್ರೆ ಸೆಪ್ಟೆಂಬರ್ 6ರಂದು 7.20 ಲಕ್ಷ ಸ್ಯಾಂಪಲ್​ಗಳನ್ನ ಮಾತ್ರ ಪರೀಕ್ಷಿಸಲಾಗಿದೆ. ಕಡಿಮೆ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಿದ್ರೂ 90,802 ಸೋಂಕಿತರು ಪತ್ತೆಯಾಗಿರೋದು ಆತಂಕಕಾರಿ.

ದೇಶದಲ್ಲಿ ನಿನ್ನೆ 8.2% ಇದ್ದ ಪಾಸಿಟಿವಿಟಿ ರೇಟ್​ ಇವತ್ತು 12.6%ಗೆ ಏರಿಕೆಯಾಗಿದೆ. ಅಂದ್ರೆ 100 ಪರೀಕ್ಷೆಗಳನ್ನ ನಡೆಸಿದ್ರೆ 12.6% ಜನರಿಗೆ ಸೋಂಕು ತಗುಲಿರೋದು ದೃಢಪಡುತ್ತಿದೆ ಅಂತ ಅರ್ಥ.

-masthmagaa.com

Contact Us for Advertisement

Leave a Reply