ಮತ್ತೊಂದು ವಿಸ್ಮಯಕಾರಿ ಫೋಟೊ ಸೆರೆಹಿಡಿದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌!

masthmagaa.com:

ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಟೆಲಿಸ್ಕೋಪ್‌ ಜೇಮ್ಸ್‌ ವೆಬ್ ಸಾಲು ಸಾಲು ವಿಸ್ಮಯಕಾರಿ ಫೋಟೊಗಳನ್ನ ಸೆರೆಹಿಡಿದು ಭೂಮಿಗೆ ಕಳುಹಿಸುತ್ತಿದೆ. ಇದೀಗ ನಾಸಾ ಸೌರಮಂಡಲದ ಅತಿ ದೊಡ್ಡ ಗ್ರಹವಾದ ಗುರು ಗ್ರಹದ ಚಿತ್ರಗಳನ್ನ ಬಿಡುಗಡೆ ಮಾಡಿದೆ. ಇದ್ರಲ್ಲಿ ಗುರು ಗ್ರಹದ ಜೊತೆಗೆ ಅದರ ಕೆಲವು ಮೂನ್‌ಗಳನ್ನ ಅಂದ್ರೆ ಉಪಗ್ರಹಗಳನ್ನ ಕೂಡ ವೆಬ್ ಟೆಲಿಸ್ಕೋಪ್ ಸೆರೆಹಿಡಿದಿದೆ. ಕೆಲವು ದಿನಗಳ ಹಿಂದೆ ವೆಬ್‌ 13 ಬಿಲಿಯನ್‌ ವರ್ಷಗಳ ಹಿಂದಿನ ಬ್ರಹ್ಮಾಂಡದ ಆರಂಭದ ಫೋಟೊ, ನಕ್ಷತ್ರಗಳ ಸಾವು ಹಾಗೂ ಗ್ಯಾಲಕ್ಸಿಗಳ ಫೋಟೊಗಳನ್ನ ಸೆರೆಹಿಡಿದಿತ್ತು.

-masthmagaa.com

Contact Us for Advertisement

Leave a Reply