ಬಿಹಾರ್‌ ಲ್ಯಾಂಡ್‌ ಮಾಫಿಯಾ! ಕೆರೆ ಇದ್ದಲ್ಲಿ ಗುಡಿಸಲು ಪ್ರತ್ಯಕ್ಷ!

masthmagaa.com:

ರಾತ್ರೋರಾತ್ರಿ ಕೆರೆಯೊಂದನ್ನ ಕಂಪ್ಲೀಟ್‌ ಆಗಿ ಮುಚ್ಚಿ ಪುಟ್ಟದಾದ ಗುಡಿಸಲನ್ನ ಕಟ್ಟಿರೋ ಘಟನೆ ಬಿಹಾರ್‌ನಲ್ಲಿ ನಡೆದಿರೋದು ವರದಿಯಾಗಿದೆ. ಬಿಹಾರ್‌ನ ದರ್ಭಾಂಗ ಜಿಲ್ಲೆಯಲ್ಲಿರೋ ಸರ್ಕಾರಿ ಭೂಮಿಯಲ್ಲಿದ್ದ ಕೆರೆಯೊಂದನ್ನ ಅತಿಕ್ರಮಿಸಿ ಈ ರೀತಿ ಮಾಡಲಾಗಿದೆ. ಈ ಕೆರೆಯ ತುಂಬಾ ಮರಳು, ಹೂಳು ತುಂಬಿ ಗುಡಿಸಲನ್ನ ಕಟ್ಟಿದ್ದಾರೆ. ಅಲ್ಲಿ ಈ ಹಿಂದೆ ಕೆರೆಯೇ ಇರಲಿಲ್ಲ ಅನ್ನೋ ತರ ಲೆವೆಲ್‌ ಮಾಡಿದ್ದಾರೆ. ನಂತರ ಅಲ್ಲಿನ ನಿವಾಸಿಗಳು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾತನಾಡಿ ʻಈ ಕೆರೆ ಒಳಗೆ ಹೂಳು ತುಂಬಿಸೋ ಕಾರ್ಯ ಕಳೆದ 10-15 ದಿನಗಳ ಕಾಲ ನಡೆದಿತ್ತು. ಈ ಕೆಲಸವನ್ನ ಹೆಚ್ಚಾಗಿ ರಾತ್ರಿ ವೇಳೆ ಮಾಡಲಾಗಿದೆ. ಆದ್ರೆ ಈ ಕೆಲಸ ಮಾಡಿರೋರು ಯಾರು ಅಂತ ಇನ್ನೂ ತಿಳಿದು ಬಂದಿಲ್ಲ, ಈ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply