ಸೋಶಿಯಲ್‌ ಮೀಡಿಯಾ ಎಫೆಕ್ಟ್‌! ಪೋಷಕರಲ್ಲಿ ಕ್ಷಮೆ ಕೇಳಿದ ಮೆಟಾ CEO!

masthmagaa.com:

ಸೋಶಿಯಲ್‌ ಮೀಡಿಯಾದಿಂದ ಶೋಷಣೆಗೆ ಒಳಗಾಗಿ ಮೃತಪಟ್ಟ ಮಕ್ಕಳ ಪೋಷಕರಲ್ಲಿ ಇದೀಗ ಮೆಟಾ CEO ಮಾರ್ಕ್‌ ಜ಼ುಕರ್‌ಬರ್ಗ್‌ ಕ್ಷಮೆ ಕೇಳಿದ್ದಾರೆ. ಎಸ್‌, ಮಕ್ಕಳಿಗೆ ಆನ್‌ಲೈನ್‌ ಮೂಲಕ ಹಾನಿಯಾಗ್ತಿದೆ ಅನ್ನೋ ಆರೋಪದ ಮೇಲೆ ಅಮೆರಿಕದ ಸಂಸತ್ತಿನಲ್ಲಿ ವಿಚಾರಣೆ ನಡೆಸಲಾಗಿತ್ತು. ಇಲ್ಲಿ ಮಾರ್ಕ್‌ ಜ಼ುಕರ್‌ಬರ್ಗ್‌ ಮತ್ತು ಸ್ನ್ಯಾಪ್‌ಚಾಟ್‌ ಕಂಪನಿಯ CEO ಇವಾನ್‌ ಸ್ಪೀಗೆಲ್‌ ಸೇರಿ 5 ಮಂದಿ ಸೋಶಿಯಲ್‌ ಮೀಡಿಯಾ ಪ್ರಮುಖರು ಹಾಜರಿದ್ರು. ಈ ಸಂದರ್ಭದಲ್ಲಿ ಜ಼ುಕರ್‌ಬರ್ಗ್‌, ʻಸೋಶಿಯಲ್‌ ಮೀಡಿಯಾದಿಂದ ನೀವೇನೆಲ್ಲಾ ಅನುಭವಿಸಿದ್ರೋ, ಅದಕ್ಕೆ ನಾನು ಕ್ಷಮೆ ಕೇಳ್ತೀನಿ. ನಿಮಗೆಲ್ಲಾ ಆಗಿರುವಂತೆ ಇನ್ಯಾರ್ಗೂ ಆಗ್ಬಾರ್ದು. ಈ ಬಗ್ಗೆ ನಾವು ಕೆಲಸ ಮಾಡ್ತೀವಿʼ ಅಂತ ಹೇಳಿದ್ದಾರೆ. ಇನ್ನು ಇವಾನ್‌ ಸ್ಪೀಗೆಲ್‌ ಕೂಡ ಇದೇ ರೀತಿ ಪೋಷಕರಿಗೆ ಸಂತಾಪ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply