ಉ.ಕೊರಿಯಾ: ಸಾಮೂಹಿಕ ರ‍್ಯಾಲಿಗಳಲ್ಲಿ ಅಮೆರಿಕ ವಿರುದ್ಧ ಘೊಷಣೆಗಳು

masthmagaa.com:

ಕೊರಿಯನ್‌ ಯುದ್ಧದ 73ನೇ ವರ್ಷಾಚರಣೆಯನ್ನ ಉತ್ತರ ಕೊರಿಯಾ ಆಚರಿಸಿದೆ. ಈ ವೇಳೆ ಅಲ್ಲಿನ ಪ್ಯಾಂಗಾಂಗ್‌ ನಗರದಲ್ಲಿ ಸಾಮೂಹಿಕ ರ‍್ಯಾಲಿಗಳು ನಡೆದಿವೆ. ಅದ್ರಲ್ಲೂ ಅಲ್ಲಿನ ಜನರು ಅಮೆರಿಕ ವಿನಾಶಕ್ಕಾಗಿ ಸೇಡಿನ ಕದನ ಅಥ್ವಾ ʻwar of revengeʼ ಅನ್ನೊ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಉತ್ತರ ಕೊರಿಯಾದ ರಾಜಧಾನಿಯಲ್ಲಿ ನಡೆದ ಈ ಸಾಮೂಹಿಕ ರ‍್ಯಾಲಿಗಳಲ್ಲಿ ಸುಮಾರು 1.2 ಲಕ್ಷಕ್ಕೂ ಅಧಿಕ ಕಾರ್ಮಿಕರು ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ರು ಎನ್ನಲಾಗಿದೆ. ಅಲ್ಲಿನ ಸ್ಟೇಡಿಯಂ ಒಂದ್ರಲ್ಲಿ ಜನರು ಕಿಕ್ಕಿರಿದು ಸೇರಿರೊ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಲ್ದೇ ರ‍್ಯಾಲಿಗಳಲ್ಲಿ ʻಸಂಪೂರ್ಣ ಅಮೆರಿಕ ನಮ್ಮ ಶೂಟಿಂಗ್‌ ರೇಂಜ್‌ನಲ್ಲಿದೆ ಅಂದ್ರೆ ಇಲ್ಲಿಂದಲೇ ಸಂಪೂರ್ಣ ಅಮೆರಿಕವನ್ನ ಟಾರ್ಗೆಟ್‌ ಮಾಡಬಹುದು ಹಾಗೂ ಸಾಮ್ರಾಜ್ಯಶಾಹಿ ಅಮೆರಿಕ ಶಾಂತಿಯನ್ನ ಹಾಳು ಮಾಡುವ ವಿಧ್ವಂಸಕʼ ಅಂತ ಬರೆದಿರೊ ಘೋಷಣಾ ಫಲಕಗಳನ್ನ ಪ್ರದರ್ಶಿಸಿದ್ದಾರೆ. ಅಮೆರಿಕವನ್ನ ಶಿಕ್ಷಿಸಲು ಉತ್ತರ ಕೊರಿಯಾ ಬಲಿಷ್ಠವಾದ ಅಸ್ತ್ರವನ್ನ ಹೊಂದಿದೆ. ಈ ನೆಲದ ಯೋಧರು ಶತ್ರುವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯ್ತಾ ಇದಾರೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇತ್ತ ಅಮೆರಿಕ ಈ ಪ್ರದೇಶದಲ್ಲಿ ಅಂದ್ರೆ ಕೊರಿಯಲ್‌ ಪೆನಿನ್ಸುಲಾಕ್ಕೆ ಸ್ಟ್ರಾಟಜಿಕ್‌ ಶಸ್ತ್ರಗಳನ್ನ ಕಳಿಸಿ, ನ್ಯೂಕ್ಲಿಯರ್‌ ವಾರ್‌ನ್ನ ಪ್ರಚೋದಿಸುವ ಪ್ರಯತ್ನಗಳನ್ನ ಅಮೆರಿಕ ಮಾಡ್ತಾಯಿದೆ ಅಂತ ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿಕೆ ರಿಲೀಸ್‌ ಮಾಡಿದೆ. ಅಂದ್ಹಾಗೆ ಅಣ್ವಸ್ತ್ರ ಸಜ್ಜಿತ ಉತ್ತರ ಕೊರಿಯಾ ಇಂಟರ್‌ಕಾಂಟಿನೆಂಟಲ್‌ ಬ್ಯಾಲೆಸ್ಟಿಕ್‌ ಮಿಸೈಲ್‌ ಸೇರಿದಂತೆ ವಿವಿಧ ಅಸ್ತ್ರಗಳ ಪರೀಕ್ಷೆ ನಡೆಸ್ತಾನೇ ಇದೆ. ಇದು ಉತ್ತರ ಕೊರಿಯಾಗ ಹಾಗೂ ದಕ್ಷಿಣ ಕೊರಿಯಾ ಮತ್ತು ಅದರ ಪರಮ ಮಿತ್ರ ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗಿದೆ. ಅಲ್ದೇ ಉತ್ತರ ಹಾಗೂ ದಕ್ಷಿಣ ಕೊರಿಯಾ ನಡುವೆ ಟೆಕ್ನಿಕಲಿ ಯುದ್ಧದ ಸನ್ನಿವೇಶ ಹಾಗೇ ಇದೆ. ಯಾಕಂದ್ರೆ 1950-53ರಲ್ಲಿ ನಡೆದ ಸಂಘರ್ಷ ಒಪ್ಪಂದದ ಮೂಲಕ ಬಗೆಹರಿಯದೇ, ಕದನ ವಿರಾಮದಲ್ಲಿ ಕೊನೆಗೊಂಡಿದೆ. ಸೋ ಕದನ ವಿರಾಮವನ್ನ ಯಾವಾಗ ಬೇಕಾದ್ರೂ ಅಂತ್ಯಗೊಳಿಸಬಹುದು. ಅಲ್ದೇ ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯಾವನ್ನ ಎದುರು ಹಾಕಿಕೊಂಡು ಅಮೆರಿಕ ದಕ್ಷಿಣ ಕೊರಿಯಾ ಜೊತೆ ಸ್ವಲ್ಪ ಜಾಸ್ತಿನೇ ಕ್ಲೋಸ್‌ ಆಗ್ತಿದೆ. ಆವಾಗಾವಾಗ ಸೇನಾಭ್ಯಾಸ ಮಾಡೋದೆಲ್ಲ ಮಾಡ್ತಿದೆ. ಹೀಗಾಗಿ ಉತ್ತರ ಕೊರಿಯಾ ಹಾಗೂ ಅಮೆರಿಕದ ನಡುವೆ ಉದ್ವಿಗ್ನತೆ ಜಾಸ್ತಿನೇ ಆಗಿದೆ.

-masthmagaa.com

Contact Us for Advertisement

Leave a Reply