ಉತ್ತರದ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಹಾವಳಿ..!

masthmagaa.com:

ದೆಹಲಿ: ದೇಶದಲ್ಲಿ ಒಟ್ಟಾರೆಯಾಗಿ ಕೊರೋನಾ ವೈರಸ್ ಕಡಿಮೆಯಾಗ್ತಿದ್ರೂ ಕೂಡ ಉತ್ತರದ ರಾಜ್ಯಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಾ ಇದೆ. ಅಷ್ಟೇ ಅಲ್ಲ.. ಮೃತರ ಸಂಖ್ಯೆ ಕೂಡ ಜಾಸ್ತಿಯಾಗುತ್ತಲೇ ಇದೆ. ದೆಹಲಿಯಲ್ಲಿ ಕಳೆದ 10 ದಿನಗಳಲ್ಲಿ 728 ಮಂದಿ ಮೃತಪಟ್ಟಿದ್ದು, ಮಹಾರಾಷ್ಟ್ರ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನವನ್ನು 549 ಸಾವಿನೊಂದಿಗೆ ಪಶ್ಚಿಮ  ಬಂಗಾಳ ಪಡೆದುಕೊಂಡಿದೆ. ಅಷ್ಟೇ ಅಲ್ಲ.. ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿ ವೇಗದ ಏರಿಕೆ ಕಂಡು ಬರುತ್ತಿದೆ.

-masthmagaa.com

Contact Us for Advertisement

Leave a Reply