ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ: ಬೌಂಡರಿ ಲೈನ್‌ ಹೆಚ್ಚಿಸಿದ ICC

masthmagaa.com:

ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿ ಹಿನ್ನೆಲೆಯಲ್ಲಿ ICC ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಪಿಚ್ ಕ್ಯುರೇಟರ್‌ಗಳಿಗೆ ಮಹತ್ವದ ಸೂಚನೆ ನೀಡಿದೆ. ಈ ವಿಶ್ವಕಪ್ 2023ರಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಐಸಿಸಿ ಟಾಸ್ ಮತ್ತು ಇಬ್ಬನಿಯ ಪ್ರಭಾವವನ್ನು ಕಡಿಮೆ ಮಾಡಲು ಪಿಚ್ ಕ್ಯುರೇಟರ್‌ಗಳಿಗೆ ‘ಪ್ರೊಟೊಕಾಲ್’ ಬಿಡುಗಡೆ ಮಾಡಿದೆ. ಅದರಂತೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುವ ಕ್ರೀಡಾಂಗಣಗಳ ಪಿಚ್‌ನಲ್ಲಿ ಹೆಚ್ಚಿನ ಹುಲ್ಲು ಇಡುವಂತೆ ಸಲಹೆ ನೀಡಲಾಗಿದೆ. ಇದರಿಂದ ಸ್ಪಿನ್ನರ್‌ಗಳಂತೆ ವೇಗದ ಬೌಲರ್‌ಗಳಿಗೂ ನೆರವು ಸಿಗುತ್ತದೆ. ಅಷ್ಟೆ ಅಲ್ದೆ ಪ್ರತಿ ಕ್ರೀಡಾಂಗಣದ ಬೌಂಡರಿ ಗಡಿಯನ್ನು ವಿಸ್ತರಿಸಲಾಗಿದ್ದು, ಟೂರ್ನಿಯಲ್ಲಿ ಬೌಂಡರಿ ಗೆರೆ 70ಮೀಟರ್‌ಗೆ ಏರಿಸಲಾಗಿದೆ.

-masthmagaa.com

Contact Us for Advertisement

Leave a Reply