ಭಾರತದಲ್ಲಿ ಕೊರೋನಾ ಲಸಿಕೆ ಬಳಕೆಗೆ DCGI ಗ್ರೀನ್ ಸಿಗ್ನಲ್..!

masthmagaa.com:

ದೆಹಲಿ: ಭಾರತದಲ್ಲಿ ಆಕ್ಸ್​​ಫರ್ಡ್​​ನ ಕೋವಿಶೀಲ್ಡ್​​ ಮತ್ತು ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್​​​​​​​ ಲಸಿಕೆಯ ತುರ್ತು ಬಳಕೆಗೆ ಅಂತಿಮವಾಗಿ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಮುಖ್ಯಸ್ಥ ವಿ.ಜಿ ಸೋಮನಿ, ಎರಡೂ ಲಸಿಕೆಗಳು ವಿವಿಧ ಹಂತದ ಪ್ರಯೋಗಗಳ ಕುರಿತು ಮಾಹಿತಿ ಸಲ್ಲಿಸಿದ್ದವು. ಅದನ್ನು ಪರಿಶೀಲಿಸಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅವಕಾಶ ನೀಡಲಾಗಿದೆ ಅಂತ ಮಾಹಿತಿ ನೀಡಿದ್ರು.

ಭಾರತದಲ್ಲಿ ಅಸ್ಟ್ರಜೆನೆಕಾ-ಆಕ್ಸ್​​ಫರ್ಡ್​​ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್​​ಸ್ಟಿಟ್ಯೂಟ್ ಮತ್ತು ಕೋವ್ಯಾಕ್ಸಿನ್ ಅಭಿವೃದ್ದಿಪಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ್ದವು. ಈ ಹಿಂದೆಯೇ ಕೋವಿಶೀಲ್ಡ್​​​ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ, ನಿನ್ನೆಯಷ್ಟೇ ಭಾರತ್ ಬಯೋಟೆಕ್ ಸಂಸ್ಥೆಯ ಲಸಿಕೆ ಬಳಕೆಗೂ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.

ದೇಶದಲ್ಲಿ ಈಗಾಗಲೇ ಡ್ರೈ ರನ್ ಅಂದ್ರೆ ಲಸಿಕೆಯ ತಾಲೀಮು ನಡೆಯುತ್ತಿದೆ. ಇದೀಗ ಎರಡು ಲಸಿಕೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇವುಗಳ ಪೈಕಿ ಕೋವ್ಯಾಕ್ಸಿನ್ ಸಂಪೂರ್ಣವಾಗಿ ಸ್ವದೇಶಿ ಅನ್ನೋದು ಹೆಮ್ಮೆಯ ವಿಚಾರವಾಗಿದೆ.

-masthmagaa.com

Contact Us for Advertisement

Leave a Reply