ರಷ್ಯಾ-ಇರಾನ್‌ ಫೋನ್‌ಕಾಲ್‌ ಮಾತುಕತೆ! ಊಭಯ ನಾಯಕರು ಚರ್ಚಿಸಿದ್ದೇನು?

masthmagaa.com:

ಯುಕ್ರೇನ್‌ ಆಕ್ರಮಣದಲ್ಲಿ ರಷ್ಯಾಗೆ ಇರಾನ್‌ ಡ್ರೋನ್‌ಗಳನ್ನ ಕೊಟ್ಟು ಸಹಾಯ ಮಾಡ್ತಿದೆ ಅಂತ ಪಾಶ್ಚಿಮಾತ್ಯ ದೇಶಗಳು ಆರೋಪ ಮಾಡ್ತಾನೇ ಇವೆ. ಇದರ ಮಧ್ಯೆ ಉಭಯ ರಾಷ್ಟ್ರಗಳು ತಮ್ಮ ನಡುವಿನ ಸಂಬಂಧಗಳನ್ನ ಮತ್ತಷ್ಟು ಗಟ್ಟಿಗಳಿಸೋಕೆ ಮುಂದಾಗಿವೆ. ಈ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಇರಾನ್‌ ಅಧ್ಯಕ್ಷ ಇಬ್ರಾಹಿಮ್‌ ರೈಸಿ ಮಾತುಕತೆ ನಡೆಸಿದ್ದಾರೆ. ರಾಜಕೀಯ, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಇತರ ದ್ವಿಪಕ್ಷೀಯ ವಿಷಯಗಳನ್ನ ಫೋನ್‌ ಕಾಲ್‌ನಲ್ಲಿ ಚರ್ಚಿಸಿದ್ದಾರೆ ಅಂತ ಎರಡು ದೇಶಗಳು ಹೇಳಿಕೆಯನ್ನ ಬಿಡುಗಡೆ ಮಾಡಿವೆ. ಇದೇ ವೇಳೆ ಯುರೇಷಿಯನ್‌ (ಯುರೋಪ್‌ +ಏಷ್ಯಾ) ಪ್ರದೇಶದಲ್ಲಿ ಸಾರಿಗೆ ಸಂಪರ್ಕವನ್ನ ಅಭಿವೃದ್ದಿಪಡಿಸೋ ರಷ್ಯಾದ ಯೋಜನೆಯನ್ನ ರೈಸಿ ಅವ್ರು ಸ್ವಾಗತಿಸಿದ್ದಾರೆ ಅಂದ್ರೆ ಒಪ್ಪಿಗೆ ನೀಡಿದ್ದಾರೆ ಅಂತ ಇರಾನ್‌ ಅಧ್ಯಕ್ಷೀಯ ಕಚೇರಿ ಹೇಳಿದೆ.

-masthmagaa.com

Contact Us for Advertisement

Leave a Reply