masthmagaa.com:

ರಷ್ಯಾ ಅಭಿವೃದ್ಧಿಪಡಿಸುತ್ತಿರುವ ‘ಸ್ಪುಟ್ನಿಕ್‌-V’ ಲಸಿಕೆ ಶೇ. 95ರಷ್ಟು ಪರಿಣಾಮಕಾರಿ ಅಂತ ಕಂಪನಿ ಘೋಷಿಸಿದೆ. ಲಸಿಕೆಯ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ 91.4% ಪರಿಣಾಮಕಾರಿ ಮತ್ತು 42 ದಿನಗಳ ಬಳಿಕ 95% ಪರಿಣಾಮಕಾರಿ ಅನ್ನೋದು ಪ್ರಯೋಗದ ವೇಳೆ ಗೊತ್ತಾಗಿದೆ ಅಂತ ರಷ್ಯಾದ ಗಮಲೇ ಇನ್​ಸ್ಟಿಟ್ಯೂಟ್​ ಹೇಳಿದೆ. ನಿನ್ನೆಯಷ್ಟೇ ಆಕ್ಸ್​ಫರ್ಡ್​ ಲಸಿಕೆಯ ರಿಸಲ್ಟ್ ಹೊರ ಬಂದಿತ್ತು. ಇದರ ಪ್ರಕಾರ ಲಸಿಕೆಯ ಒಂದು ಡೋಸ್‌ 90% ಪರಿಣಾಮಕಾರಿಯಾದ್ರೆ, ಮತ್ತೊಂದು ಡೋಸ್‌ 62% ಪರಿಣಾಮಕಾರಿ. ಎರಡನ್ನೂ ಸೇರಿಸಿ ತಮ್ಮ ಲಸಿಕೆ 70.4% ಪರಿಣಾಮಕಾರಿ ಅಂತ ಕಂಪನಿ ಘೋಷಿಸಿತ್ತು. ಅಷ್ಟೇ ಅಲ್ಲ, ಕೆಲದಿನಗಳ ಹಿಂದೆ ಅಮೆರಿಕದ  ಫೈಝರ್‌ ಲಸಿಕೆ ಶೇ.95ರಷ್ಟು ಹಾಗೂ ಮೊಡೆರ್ನಾ ಲಸಿಕೆ ಶೇ. 94.5ರಷ್ಟು ಪರಿಣಾಮಕಾರಿ ಅಂತ ಹೇಳಿಕೊಂಡಿತ್ತು.

-masthmagaa.com

Contact Us for Advertisement

Leave a Reply