ಚೀನಾಗೆ ಅತಿ ದೊಡ್ಡ ತೈಲ ಪೂರೈಸೊ ರಾಷ್ಟ್ರವಾಗಿ ದಾಪುಗಾಲಿಟ್ಟ ರಷ್ಯಾ!

masthmagaa.com:

ಸೌದಿ ಅರೆಬಿಯಾವನ್ನ ಹಿಂದಿಕ್ಕಿ ಚೀನಾಗೆ ಅತಿ ದೊಡ್ಡ ತೈಲ ಪೂರೈಸೊ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ. ಕಳೆದ ವರ್ಷದಲ್ಲಿ ರಷ್ಯಾ 107.02 ಮಿಲಿಯನ್‌ ಮೆಟ್ರಿಕ್‌ ಟನ್‌ ಅಂದ್ರೆ 1070 ಲಕ್ಷ ಮೆಟ್ರಿಕ್‌ ಟನ್ ತೈಲವನ್ನ ಚೀನಾಗೆ ಪೂರೈಸಿದೆ. ಇದನ್ನ ದಿನದ ಲೆಕ್ಕದಲ್ಲಿ ಹೇಳೋದಾದ್ರೆ 2.14 ಮಿಲಿಯನ್‌ ಬ್ಯಾರಲ್‌ ಅಂದ್ರೆ ಪ್ರತಿದಿನ 21 ಲಕ್ಷಕ್ಕೂ ಅಧಿಕ ಬ್ಯಾರಲ್‌ಗಳ ತೈಲವನ್ನ ಪೂರೈಸಿದೆ. ಈ ಮೂಲಕ 2023ರಲ್ಲಿ ಚೀನಾಗೆ ಅತಿ ಹೆಚ್ಚು ಆಯಿಲ್‌ ಸಪ್ಲೈ ಮಾಡಿದ ದೇಶವಾಗಿದೆ. ಇದೇ ವೇಳೆ ಸೌದಿ ಅರೇಬಿಯಾ ಚೀನಾಗೆ ರಫ್ತು ಮಾಡ್ತಿದ್ದ ತೈಲ ಪ್ರಾಮಾಣದಲ್ಲಿ 1.8% ಕುಸಿತವಾಗಿದೆ. 2023ರಲ್ಲಿ ಸೌದಿ ಚೀನಾಗೆ 859.6 ಲಕ್ಷ ಮೆಟ್ರಿಕ್‌ ಟನ್‌ನಷ್ಟು ತೈಲ ಪೂರೈಸಿದೆ. ಅಂದ್ಹಾಗೆ ಚೀನಾ ಹಾಗೂ ಭಾರತ ದೇಶಗಳಿಗೆ ಡಿಸ್ಕೌಂಟ್‌ ಬೆಲೆಯಲ್ಲಿ ರಷ್ಯಾ ತೈಲ ಒದಗಿಸ್ತಿರೋದೇ, ಈ ಬದಲಾವಣೆಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply