ನಿರ್ಬಂಧದಿಂದ ಬಾಹ್ಯಾಕಾಶ ನಿಲ್ದಾಣ ಪತನ: ರಷ್ಯಾ ಎಚ್ಚರಿಕೆ

masthmagaa.com:

ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪತನಕ್ಕೆ ಕಾರಣವಾಗಬಹುದು ಅಂತ ರಷ್ಯಾದ ಸ್ಪೇಸ್ ಏಜೆನ್ಸಿ ರೋಸ್ಕೋಸ್​ಮೋಸ್ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್​​​ ಹೇಳಿದ್ದಾರೆ. ಕೆಲವೊಂದು ಗಂಭೀರ ನಿರ್ಬಂಧಗಳನ್ನು ತೆಗೆಯಲೇಬೇಕು.. ಈ ನಿರ್ಬಂಧಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ರಷ್ಯನ್ ವೆಸಲ್​ಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸ್ತಿವೆ. ಇದ್ರಿಂದ ಸ್ಪೇಸ್​ ಸ್ಟೇಷನ್​ನ ಆರ್ಬಿಟ್​​ ಅಂದ್ರೆ ಕಕ್ಷೆಯನ್ನು ಸರಿಪಡಿಸಲು ಸಹಕರಿಸುತ್ತಿರುವ ರಷ್ಯಾದ ಭಾಗಕ್ಕೆ ಎಫೆಕ್ಟ್ ಆಗುತ್ತೆ. ಇದ್ರಿಂದ 500 ಟನ್ ತೂಕ ಇರೋ ಈ ಸ್ಪೇಸ್ ಸ್ಟೇಷನ್ ಸಮುದ್ರಕ್ಕೆ ಅಥವಾ ಭೂಮಿ ಮೇಲೆ ಬೀಳುವ ಸಾಧ್ಯತೆ ಇದೆ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply