ಚೀನಾದಲ್ಲಿದ್ದ ಸ್ಯಾಮ್​ಸಂಗ್ ಯೂನಿಟ್​​​​ ಭಾರತಕ್ಕೆ ಶಿಫ್ಟ್​​..!

masthmagaa.com:

ನೋಯ್ಡಾ: ದಕ್ಷಿಣ ಕೊರಿಯಾದ ದಿಗ್ಗಜ ಕಂಪನಿ ಸ್ಯಾಮ್​​ಸಂಗ್​ ತನ್ನ ಮೊಬೈಲ್ ಮತ್ತು ಐಟಿ ಡಿಸ್ಪ್ಲೇ ಯೂನಿಟ್​​​ನ್ನು ಚೀನಾದಿಂದ ಭಾರತಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದೆ. ದೆಹಲಿಗೆ ಹತ್ತಿರದಲ್ಲಿರೋ ನೋಯ್ಡಾದಲ್ಲಿ ಈ ಯುನಿಟ್ ಶುರು ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿ 4,825 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಅಂತ ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಜೊತೆಗೆ ಯೋಗಿ ಆದಿತ್ಯನಾಥ್ ಸಚಿವ ಸಂಪುಟ ಇದಕ್ಕೆ ಅನುಮತಿ ಕೂಡ ನೀಡಿದೆ.

ಭಾರತದಲ್ಲಿ ಸ್ಯಾಮ್​ಸಂಗ್ ಕಂಪನಿಯ ಮೊದಲ ಹೈ ಟೆಕ್ನಿಕ್ ಪ್ರಾಜೆಕ್ಟ್​ ಇದಾಗಿದೆ. ಈ ಮೂಲಕ ಭಾರತ ಈ ರೀತಿಯ ಯುನಿಟ್ ಹೊಂದಿರೋ ವಿಶ್ವದ 3ನೇ ರಾಷ್ಟ್ರವಾಗಲಿದೆ. ಈ ಉತ್ಪಾದನಾ ಯೂನಿಟ್​​ನಿಂದ 510 ಮಂದಿ ಭಾರತೀಯರಿಗೆ ನೇರವಾಗಿ ಕೆಲಸ ಸಿಗಲಿದೆ. ಜೊತೆಗೆ ಪರೋಕ್ಷವಾಗಿ ಕೂಡ ಹಲವರಿಗೆ ಉದ್ಯೋಗ ಸಿಗಲಿದೆ. ಸ್ಯಾಮ್​ಸಂಗ್ ಟಿವಿ, ಮೊಬೈಲ್, ಟ್ಯಾಬ್​​ ಮತ್ತು ವಾಚ್​​​ಗಳಲ್ಲಿ ಬಳಸಲ್ಪಡುವ ಶೇ.70ಕ್ಕೂ ಅಧಿಕ ಡಿಸ್ಪ್ಲೇ​​ಗಳನ್ನು ಉತ್ಪಾದಿಸುತ್ತೆ. ದಕ್ಷಿಣ ಕೊರಿಯಾ, ವಿಯೆಟ್ನಾಂ ಮತ್ತು ಚೀನಾದಲ್ಲಿ ಇದರ ಯೂನಿಟ್​​ಗಳಿದ್ದವು. ಈಗ ಚೀನಾದಲ್ಲಿದ್ದ ಯೂನಿಟ್ ಭಾರತಕ್ಕೆ ಶಿಫ್ಟ್ ಆಗಲಿದೆ.

-masthmagaa.com

Contact Us for Advertisement

Leave a Reply