ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಬಹುದು: ಸುಪ್ರೀಂಕೋರ್ಟ್​​​

masthmagaa.com:

ದೆಹಲಿ: ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿರುವ ಎನ್​​ಜಿಟಿ ಅಂದ್ರೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಈ ಹಿಂದೆ ಎನ್​ಜಿಟಿ ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿತ್ತು. ಆದ್ರೆ ತೆಲಂಗಾಣ ಹೈಕೋರ್ಟ್​ ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ತೆಲಂಗಾಣದ ಪಟಾಕಿ ವ್ಯಾಪಾರಿಗಳ ಒಕ್ಕೂಟ ಸುಪ್ರೀಂಕೋರ್ಟ್​ ಮೊರೆಹೋಗಿತ್ತು. ಎನ್​​​ಜಿಟಿ ದಿನಕ್ಕೆ 2 ಗಂಟೆ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಿದ್ರೂ, ಹೈಕೋರ್ಟ್​ ಅವಕಾಶ ನೀಡ್ತಿಲ್ಲ ಅಂತ ಅರ್ಜಿ ಸಲ್ಲಿಸಿತ್ತು. ಅದರಂತೆ ಎನ್​​ಜಿಟಿ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​​​, ತೆಲಂಗಾಣ ಹೈಕೋರ್ಟ್​ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಅಲ್ಲದೆ ದೀಪಾವಳಿ, ಕ್ರಿಸ್​​ಮಸ್​​​​, ಹೊಸ ವರ್ಷ ಸೇರಿದಂತೆ ಇನ್ನು ಕೆಲ ಹಬ್ಬಗಳಿಗೆ ಈ ವಿನಾಯಿತಿ ನೀಡಲಾಗಿದೆ.

ಕರ್ನಾಟಕದಲ್ಲೂ ಈಗಾಗಲೇ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಆದ್ರೆ ಇಂತಿಷ್ಟು ಸಮಯ ಮಾತ್ರವೇ ಪಟಾಕಿ ಹೊಡೆಯಬೇಕು ಅಂತ ಆದೇಶಿಸಿಲ್ಲ. ಹೀಗಾಗಿ ರಾಜ್ಯದ ಜನ ಹಸಿರು ಪಟಾಕಿಯನ್ನು ಇಡೀ ದಿನ ಹೊಡೆಯಬಹುದಾ..? ಅಥವಾ ಸುಪ್ರೀಂಕೋರ್ಟ್​ ಆದೇಶದಂತೆ ಟೈಮಿಂಗ್ಸ್ ಪ್ರಕಾರ ಹೊಡೆಯಬೇಕಾ ಅನ್ನೋ ಗೊಂದಲ ಶುರುವಾಗಿದೆ.

ಹಸಿರು ಪಟಾಕಿ ಅಂದ್ರೆ ಏನು..? 

ಹಸಿರು ಪಟಾಕಿ ಅಂದ್ರೆ ಅಲ್ಯುಮೀನಿಯಂ, ಬೇರಿಯಂ, ಪೊಟ್ಯಾಶಿಯಂ ನೈಟ್ರೇಟ್​ ಮತ್ತು ಕಾರ್ಬನ್ ಮುಂತಾದ ಹಾನಿಕಾರಕ ರಾಸಾಯನಿಕಗಳನ್ನ ಬಳಸದೇ ತಯಾರಿಸಿದ ಪಟಾಕಿಗಳು. ಹಸಿರು ಪಟಾಕಿಗಳ ಬಳಕೆಯಿಂದ ವಾಯು ಮಾಲಿನ್ಯವನ್ನು ಶೇ. 30ರಷ್ಟು ಕಡಿಮೆ ಮಾಡಬಹುದು.. ಆದ್ರೆ ಇದರ ಶಬ್ದ ಮತ್ತು ಬೆಳಕಿನಲ್ಲಿ ಯಾವುದೇ ವ್ಯತ್ಯಾಸ ಇರೋದಿಲ್ಲ.

-masthmagaa.com

Contact Us for Advertisement

Leave a Reply