ISS ತಲುಪಿದ ಮಸ್ಕ್‌ ಕ್ರ್ಯೂ ಮಾಡ್ಯುಲ್‌!

masthmagaa.com:

ವಿಶ್ವದ ನಂಬರ್‌ 1 ಶ್ರೀಮಂತ ಎಲಾನ್‌ ಮಸ್ಕ್‌ನ ಸ್ಪೇಸ್‌ Xನ ಡ್ರಾಗನ್‌ ಸ್ಪೇಸ್‌ಕ್ರಾಫ್ಟ್‌ ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ಡಾಕ್‌ ಆಗಿದೆ. ಅಂದ್ರೆ ಸ್ಪೇಸ್‌ ಸ್ಟೇಷನ್‌ನ್ನ ತಲುಪಿದೆ. 4 ಗಗನಯಾತ್ರಿಗಳನ್ನ ಹೊತ್ತ ಕ್ರ್ಯೂ ಡ್ರಾಗನ್‌ ಕ್ಯಾಪ್ಸುಲ್‌ ನಿನ್ನೆ ಬೆಳಿಗ್ಗೆ 9.16 ಗಂಟೆಗೆ ISSನಲ್ಲಿ ಅಮೆರಿಕ ನಿರ್ಮಿತ ಹಾರ್ಮೊನಿ ಮಾಡ್ಯುಲ್‌ನಲ್ಲಿ ಡಾಕ್‌ ಆಗಿದೆ. ಅಂದ್ಹಾಗೆ ನಾಸಾದ ಕೆನಡಿ ಸ್ಪೇಸ್‌ ಸೆಂಟರ್‌ನ ಪ್ಯಾಡ್‌ 39A ನಿಂದ ಶನಿವಾರ ಲಾಂಚ್‌ ಮಾಡಲಾಗಿತ್ತು. 30 ಗಂಟೆಗಳ ಜರ್ನಿ ಬಳಿಕ, 4 ಗಗನಯಾತ್ರಿಗಳು ISSನ್ನ ತಲುಪಿದ್ದಾರೆ. 6 ತಿಂಗಳ ಕಾಲ ISSನಲ್ಲಿರುವ ಈ ಗಗನಯಾತ್ರಿಗಳನ್ನ, ಈಗಾಗಲೇ ISSನಲ್ಲಿರುವ 7 ಗಗನಯಾತ್ರಿಗಳು ವೆಲ್‌ಕಮ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply