masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 63,489 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 944 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25.89 ಲಕ್ಷ ದಾಟಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 49,980 ಆಗಿದ್ದು 50 ಸಾವಿರ ಸಮೀಪಿಸಿದೆ. 

ಕಳೆದ 24 ಗಂಟೆಗಳಲ್ಲಿ 53,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 18.62 ಲಕ್ಷ ದಾಟಿದ್ದು, 6.77 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 71.91% ಇದ್ದು, ಸಾವಿನ ಪ್ರಮಾಣ 1.93% ಇದೆ. ಆಗಸ್ಟ್​ 15ರಂದು ದೇಶದಲ್ಲಿ 7.46 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 2.93 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.56 ಲಕ್ಷ ಪ್ರಕರಣ (19,000+ ಸಾವು)

2. ಆಂಧ್ರಪ್ರದೇಶ: 88,000+ ಪ್ರಕರಣ (2,500+ ಸಾವು)

3. ಕರ್ನಾಟಕ: 81,000+ ಪ್ರಕರಣ (3,800+ ಸಾವು)

4. ತಮಿಳುನಾಡು: 54,000+ ಪ್ರಕರಣ (5,600+ ಸಾವು)

5. ಉತ್ತರಪ್ರದೇಶ: 51,000+ ಪ್ರಕರಣ (2,300+ ಸಾವು)

6. ಬಿಹಾರ: 32,000+ ಪ್ರಕರಣ (450 ಸಾವು)

7. ಪಶ್ಚಿಮ ಬಂಗಾಳ: 27,000+ ಪ್ರಕರಣ (2,300+ ಸಾವು)

8. ತೆಲಂಗಾಣ: 22,000+ ಪ್ರಕರಣ (693 ಸಾವು)

9. ಅಸ್ಸಾಂ: 22,000+ ಪ್ರಕರಣ (182 ಸಾವು)

10. ಒಡಿಶಾ: 16,000+ ಪ್ರಕರಣ (333 ಸಾವು)

-masthmagaa.com

Contact Us for Advertisement

Leave a Reply