masthmagaa.com:

ಬಲವಂತದ ಮತಾಂತರ ವಿರುದ್ಧ ಸುಗ್ರೀವಾಜ್ಞೆ ತರಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಪ್ರಕಾರ ಬಲವಂತವಾಗಿ ಒಂದು ಧರ್ಮದವರನ್ನ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡಿದ್ರೆ ಅಂಥವರಿಗೆ 1ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಅದ್ರಲ್ಲೂ ಅಪ್ರಾಪ್ತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರನ್ನ ಮತಾಂತರ ಮಾಡಿದ್ರೆ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 25,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ಇನ್ನು ಸಾಮೂಹಿಕವಾಗಿ ಜನರನ್ನ ಮತಾಂತರ ಮಾಡಿದ್ರೆ ಅಂಥವರಿಗೆ 3ರಿಂದ 10 ವರ್ಷ ಜೈಲು ಮತ್ತು 50,000 ದಂಡ ವಿಧಿಸಬಹುದಾಗಿದೆ. ಜೊತೆಗೆ ಯಾವುದಾದರು ವ್ಯಕ್ತಿಯನ್ನು ಮತಾಂತರ ಮಾಡಿ ಮದುವೆ ಮಾಡಿಕೊಳ್ಳಬೇಕು ಅಂತಿದ್ರೆ ಆಗ ಮದುವೆಗೂ 2 ತಿಂಗಳು ಮುಂಚಿತವಾಗಿ ಜಿಲ್ಲಾಧಿಕಾರಿಗಳಿಂದ ಇದಕ್ಕೆ ಅನುಮತಿ ಪಡೆಯಬೇಕು ಅಂತ ತಿಳಿಸಲಾಗಿದೆ.

ಕರ್ನಾಟಕ, ಮಧ್ಯಪ್ರದೇಶ ಮುಂತಾದ ಬಿಜೆಪಿ ಆಡಳಿತವಿರುವ ರಾಜ್ಯಗಳು ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ತರಲು ಚಿಂತಿಸುತ್ತಿವೆ. ಇಂತಹ ಸಂದರ್ಭದಲ್ಲೇ ಉತ್ತರಪ್ರದೇಶ ಸರ್ಕಾರ ಮತಾಂತರ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply