masthmagaa.com:

ಆಕ್ಸ್‌ಫರ್ಡ್‌ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಸೇರಿಕೊಂಡು ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆಯನ್ನ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 250 ರೂಪಾಯಿಯಂತೆ ಮತ್ತು ಖಾಸಗಿ ಮಾರುಕಟ್ಟೆಗೆ 1,000 ರೂಪಾಯಿಯಂತೆ ಮಾರಾಟ ಮಾಡಲಾಗುವುದು ಅಂತ ಸೀರಂ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾದ ಸಿಇಒ ಅಡಾರ್​‌ ಪೂನಾವಾಲಾ ಹೇಳಿದ್ದಾರೆ.

ನಿನ್ನೆಯಷ್ಟೇ ಆಕ್ಸ್​ಫರ್ಡ್​ ಲಸಿಕೆಯ ರಿಸಲ್ಟ್ ಹೊರ ಬಂದಿತ್ತು. ಇದರ ಪ್ರಕಾರ ಲಸಿಕೆಯ ಒಂದು ಡೋಸ್‌ 90% ಪರಿಣಾಮಕಾರಿಯಾದ್ರೆ, ಮತ್ತೊಂದು ಡೋಸ್‌ 62% ಪರಿಣಾಮಕಾರಿ. ಎರಡನ್ನೂ ಸೇರಿಸಿ ತಮ್ಮ ಲಸಿಕೆ 70.4% ಪರಿಣಾಮಕಾರಿ ಅಂತ ಕಂಪನಿ ಘೋಷಿಸಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಆಕ್ಸ್​ಫರ್ಡ್​ ಲಸಿಕೆಯ ಜವಾಬ್ದಾರಿ ಹೊತ್ತಿರುವ ಸೀರಂ ಇನ್​ಸ್ಟಿಟ್ಯೂಟ್ ಅದರ ರೇಟನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಈ ಲಸಿಕೆಗೆ ‘ಕೋವಿಶೀಲ್ಡ್’ ಅಂತ ಹೆಸರಿಡಲಾಗಿದೆ.

‘ಆಕ್ಸ್​ಫರ್ಡ್​ ಲಸಿಕೆಯ ಫಲಿತಾಂಶ ಖುಷಿ ತಂದಿದೆ. ಈಗಾಗಲೇ ಲಸಿಕೆಯ 4 ಕೋಟಿ ಡೋಸ್‌ಗಳನ್ನ ಸಿದ್ಧಪಡಿಸಲಾಗಿದೆ. ಜನವರಿ ವೇಳೆಗೆ 10 ಕೋಟಿ ಡೋಸ್‌ಗಳನ್ನ ತಯಾರಿಸುವ ಗುರಿ ಹೊಂದಿದ್ದೇವೆ. ಒಟ್ಟು ತಯಾರಾದ ಲಸಿಕೆಯಲ್ಲಿ ಶೇ. 90ರಷ್ಟು ಭಾರತ ಸರ್ಕಾರಕ್ಕೆ ಹೋಗಲಿದ್ದು, ಉಳಿದ ಶೇ. 10ರಷ್ಟು ಖಾಸಗಿ ಮಾರುಕಟ್ಟೆಗೆ ಹೋಗಬಹುದು’ ಅಂತ ಅಡಾರ್ ಪೂನಾವಾಲಾ ಹೇಳಿದ್ದಾರೆ. ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಹಿರಿಯರಿಗೆ ಲಸಿಕೆ ನೀಡಲಾಗುವುದು. ಆದ್ರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸದ್ಯಕ್ಕೆ ಲಸಿಕೆ ಸಿಗುವುದು ಕಷ್ಟ. ಅವ್ರು 2021ರ ಅಂತ್ಯದವರೆಗೂ ಕಾಯಬೇಕಾಗಬಹುದು ಅಂತ ತಿಳಿಸಿದ್ದಾರೆ.

masthmagaa.com

Contact Us for Advertisement

Leave a Reply