2.9 ಕೋಟಿ ಬೆಳಕಿನ ವರ್ಷದ ಹಿಂದೆ ಜಗತ್ತು ಹೇಗಿತ್ತು? ನಾಸಾ ಚಿತ್ರದಲ್ಲಿ ಬಹಿರಂಗ!

masthmagaa.com:

2.9 ಕೋಟಿ ಲೈಟ್‌ ಇಯರ್ಸ್‌ ಅಥವಾ ಬೆಳಕಿನ ವರ್ಷದ ಹಿಂದೆ ಜಗತ್ತು ಹೇಗೆ ಕಂಗೊಳಿಸಿತ್ತು? ನಕ್ಷತ್ರ ಪುಂಜಗಳು ಹೇಗಿದ್ದವು ಅನ್ನೋ ಬಗ್ಗೆ ನಾಸಾ ಕೆಲ ಚಿತ್ರಗಳನ್ನ ರಿವೀಲ್‌ ಮಾಡಿದೆ. ನಾಸಾದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಈ ಚಿತ್ರವನ್ನ ಕ್ಯಾಪ್ಚರ್‌ ಮಾಡಿದ್ದು ಈ ನಕ್ಷತ್ರ ಪುಂಜ ಮಿಲ್ಕಿವೇ ಅಥವಾ ಕ್ಷೀರ ಪಥಕ್ಕಿಂತಲೂ ದೊಡ್ಡದು, ಮತ್ತು ಸುರಳಿಯಾಕಾರದಲ್ಲಿದೆ ಅಂತ ಹೇಳಿದೆ. ಈ ಹಿಂದೆ ಹಬಲ್‌ ಟೆಲಿಸ್ಕೋಪ್‌ ಐಸಿ 5332 ಪ್ರಭಾವ ಶಾಲಿ ಚಿತ್ರವನ್ನ ಸೆರೆ ಹಿಡಿದಿತ್ತು. ಆದರೆ ಕ್ಯಾಪ್ಚರ್‌ ಮಾಡಿದ್ದ ಆ ಚಿತ್ರ ಹೆಚ್ಚು ತಂಪಾಗಿರದ ಕಾರಣ ವಿದ್ಯುತ್ಕಾಂತೀಯ ವರ್ಣ ಪಲ್ಲಟದಿಂದಾಗಿ, ಅತಿಗೆಂಪು ವರ್ಣ ಪ್ರದೇಶಗಳನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾಸಾ ವಿಜ್ಞಾನಿಗಳು ಈಗ MIRI ಅಂದ್ರೆ, ಮಿಡ್-ಇನ್‌ಫ್ರಾರೆಡ್ ಇನ್‌ಸ್ಟ್ರುಮೆಂಟ್ ವಿಧಾನ ಬಳಿಸಿಕೊಂಡಿದ್ರು. ಅದು ನಕ್ಷತ್ರ ಪುಂಜಗಳನ್ನು ಸೆರೆಹಿಡಿದೆ. ಈ MIRI ಇತರ ವೀಕ್ಷಣಾಲಯಗಳಿಗಿಂತ 33 ಡಿಗ್ರಿ ಸೆಲ್ಸಿಯಸ್ ಕಡಿಮೆ, ಶೂನ್ಯ ತಾಪಮಾನಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವ, ಹಾಗೂ 266 ಡಿಗ್ರಿ ಸೆಲ್ಸಿಯಸ್ ನಷ್ಟು ಅತ್ಯಂತ ಶೀತ ತಾಪಮಾನದಲ್ಲಿ ಕಾರ್ಯ ನಿರ್ವಹಿಸುತ್ತೆ. ಹೀಗಾಗಿ ಪ್ರಸ್ತುತ ಸೆರೆಹಿಡಿಯಲಾದ IC-5332 ಚಿತ್ರವು 66 ಸಾವಿರ ಲೈಟ್‌ ಇಯರ್ಸ್‌ಗಳ ವ್ಯಾಸ ಹೊಂದಿದೆ. ಈ ನಕ್ಷತ್ರಪುಂಜವು ಭೂಮಿಗೆ ಬಹುತೇಕ ಮುಖಾಮುಖಿಯಾಗಿದೆ ಅಂತ ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply