ರಷ್ಯಾ ಸೇನೆಗೆ ಕೊಲೆಗಾರರು, ದರೋಡೆಕಾರರ ಎಂಟ್ರಿ!

masthmagaa.com:

ಯುಕ್ರೇನ್‌ ಸಂಘರ್ಷ 9ನೇ ತಿಂಗಳಿಗೆ ಕಾಲಿಟ್ಟಿದ್ದು, ಯುದ್ದ ಕೊನೆಗಾಣೋ ಯಾವುದೇ ಲಕ್ಷಣ ಕಾಣಸ್ತಿಲ್ಲ. ಅದ್ರಲ್ಲೂ ರಷ್ಯಾ ತನ್ನ ಸೇನೆಯನ್ನ ಸಜ್ಜುಗೊಳಿಸೋದ್ರಲ್ಲಿ ಬ್ಯುಸಿಯಾಗಿದೆ. ಯುಕ್ರೇನ್‌ನ್ನ ಹೇಗಾದ್ರು ಮಾಡಿ ವಶ ಮಾಡ್ಕೋಬೇಕು ಅಂತ ಹಠ ಬಿದ್ದಿರೊ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಇತ್ತೀಚಿಗಷ್ಟೇ ತಮ್ಮ ಖಾಸಗಿ ಸೇನೆಗೆ ಏಡ್ಸ, ಹೆಪಟೈಟಿಸ್-ಸಿ ಅಂತ ರೋಗಿಗಳಿಂದ ಬಳಲುತ್ತಿರೊ ಅಪರಾಧಿಗಳನ್ನ ನೇಮಿಸಿಕೊಳ್ಳೊದಾಗಿ ಹೇಳಿದ್ರು. ಇದೀಗ ಕೊಲೆ, ಕಳ್ಳತನ, ಡ್ರಗ್ಸ್‌ ಕಳ್ಳಸಾಗಾಣಿಕೆ ಮತ್ತು ಇತರ ಗಂಭೀರ ಅಪರಾಧಗಳನ್ನ ಮಾಡಿರೊ ಅಪರಾಧಿಗಳನ್ನ ಸೇನೆಗೆ ನೇಮಿಸಿಕೊಳ್ಳೋ ಕಾನೂನಿಗೆ ಸೈನ್‌ ಮಾಡಿದ್ದಾರೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಸರ್ಕಾರಿ ಅಧಿಕಾರಿಗಳ ಹತ್ಯೆಯಲ್ಲಿ ಭಾಗಿಯಾದವ್ರು, ಉಗ್ರರು ಅಥ್ವಾ ಉಗ್ರ ಚಟುವಟಿಕೆಗಳಲ್ಲಿ ಭಾಗಿಯೋದರನ್ನ ಸೇನೆಯಿಂದ ಹೊರಗಿಡಲಾಗಿದೆ. ಇನ್ನು ಈ ಬಗ್ಗೆ ಮಾತಾಡಿದ ಪುಟಿನ್‌, ಕ್ರೆಮ್ಲಿನ್‌ ಈಗಾಗಲೇ ಹೆಚ್ಚುವರಿ 18 ಸಾವಿರ ಸೈನಿಕರನ್ನ ಯುಕ್ರೇನ್‌ ಯುದ್ದಕ್ಕಾಗಿ ಸಜ್ಜುಗೊಳಿಸಿದೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ನಿಂದ ವಶಪಡಿಸಿಕೊಂಡಿರೊ ಖೆರ್ಸೊನ್‌ ಪ್ರದೇಶ ನೀರು ಹಾಗೂ ಪವರ್‌ ಸಮಸ್ಯೆಯನ್ನ ಎದುರಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಮೂರು ಪವರ್‌ ಲೈನ್‌ಗಳು ಹಾನಿಯಾಗಿವೆ, ಈ ಕೃತ್ಯವನ್ನ ಯುಕ್ರೇನ್‌ ಮಾಡಿದೆ ಅಂತ ರಷ್ಯಾ ನೇಮಿಸಿರೊ ಆಡಳಿತ ಆರೋಪಿಸಿದೆ.

-masthmagaa.com

Contact Us for Advertisement

Leave a Reply