ತಮಿಳು ಪ್ರಧಾನಿ: ಮೋದಿ ಮೇಲೆ ಅಮಿತ್‌ ಶಾಗೆ ಸಿಟ್ಟೇಕೆ ಎಂದ ಸ್ಟಾಲಿನ್‌

masthmagaa.com:

ತಮಿಳುನಾಡಿನ ವ್ಯಕ್ತಿ ಮುಂದೆ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಅವರ ವಿರುದ್ಧ ಅಮಿತ್ ಶಾ ಅವರಿಗೆ ಸಿಟ್ಟೇಕೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ ಅಂತ ಸ್ಟಾಲಿನ್ ಹೇಳಿದ್ದಾರೆ. ಜೊತೆಗೆ, ಒಂದು ವೇಳೆ ತಮಿಳು ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಆಗಬೇಕು ಅನ್ನೋದು ಬಿಜೆಪಿ ಇಚ್ಛೆಯಾದರೆ ಈಗಲೇ ಮಾಡಬಹುದು. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸುಂದರ್‌ ರಾಜನ್ ಅವರು ಇದ್ದಾರೆ. ಕೇಂದ್ರ ಸಚಿವ ಎಲ್. ಮುರುಘನ್ ಇದ್ದಾರೆ ಇವೆಲ್ಲವೂ ಕಟ್ಟುಕಥೆ, ನಿಮಗೆ ಧೈರ್ಯವಿದ್ದರೆ ಈ ಹೇಳಿಕೆಯನ್ನು ಬಹಿರಂಗವಾಗಿ ನೀಡಿ ಅಂತ ಸ್ಟಾಲಿನ್ ಅಮಿತ್‌ ಶಾ ಅವರಿಗೆ ಸವಾಲೆಸೆದಿದ್ದಾರೆ. ಭಾನುವಾರವಷ್ಟೇ ತಮಿಳುನಾಡು ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರ ಜೊತೆ ಸಭೆಯಲ್ಲಿ, ಭವಿಷ್ಯದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿ ಆಗುವಂತೆ ನೀವು ಚುನಾವಣೆಯಲ್ಲಿ ಶ್ರಮಿಸಬೇಕು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply