ರಾಜಸ್ತಾನ: ಸರ್ಕಾರಿ ಆಸ್ಪತ್ರೆ ಮುಂದೆಯೇ ಗರ್ಭಿಣಿಯ ಹೆರಿಗೆ!

masthmagaa.com:

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಿದ ಹಿನ್ನಲೆ ಆಸ್ಪತ್ರೆ ಮುಂದೆ ತುಂಬು ಗರ್ಭಿಣಿಯೊಬ್ರು ಬಲವಂತವಾಗಿ ಜನ್ಮ ನೀಡಿರೊ ಅಮಾನವೀಯ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಜೈಪುರ್‌ನ ಕನ್ವಾಟೀಯಾ ಸರ್ಕಾರಿ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದ್ದು, ಈ ಸಂಬಂಧ ಜನ ದುರಂಹಕಾರಿ ವೈದ್ಯರನ್ನ ಅಮಾನತು ಮಾಡಲಾಗಿದೆ ಅಂತ ಗೊತ್ತಾಗಿದೆ. ಇನ್ನೊಂದೆಡೆ ನನಗೆ, 12ನೇ ತರಗತಿ ಬೋರ್ಡ್‌ ಎಕ್ಸಾಮ್‌ಗೆ ಅನುಮತಿ ಪತ್ರ ನಿರಾಕರಿಸಲಾಗಿದೆ ಅಂತೇಳಿ ಕಳೆದ ವರ್ಷ ಅತ್ಯಾಚಾರಕ್ಕೆ ಒಳಗಾಗಿದ್ದ ಅಜ್ಮೀರ್‌ದ ವಿದ್ಯಾರ್ಥಿನಿಯೊಬ್ರು ಮಕ್ಕಳ ಕಲ್ಯಾಣ ಸಮಿತಿಗೆ ಕಾಲೇಜಿನ ವಿರುದ್ದ ದೂರು ನೀಡಿದ್ದಾರೆ. ಅಲ್ದೇ ಶಾಲೆಯ ಶಿಕ್ಷಣರು ನನಗೆ ಮನೆಯಲ್ಲೆ ಓದು ಅಂತೇಳಿದ್ದು, ಶಾಲೆಗೆ ಬಂದ್ರೆ ಶಾಲೆಯ ವಾತಾವರಣವೇ ಹಾಳಾಗುತ್ತೆ ಅಂದಿದ್ದಾರೆ ಅಂತ ವಿದ್ಯಾರ್ಥಿನಿ ತಮ್ಮ ಅಳಿಲು ತೊಡ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply