ಟೀಕೆ ನಡುವೆಯು ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ʻಅನಿಮಲ್‌ʼ!

masthmagaa.com:

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ ಸಧ್ಯ ವಿಪರೀತ ಚರ್ಚೆ ಹುಟ್ಟುಹಾಕಿರುವ ಮೂವಿ. ಈ ಸಿನಿಮಾದಲ್ಲಿ ಹಿಂಸೆಯನ್ನು ವಿಜೃಂಭಿಸಲಾಗಿದೆ ಅಂತ ಸಿಕ್ಕಾಪಟ್ಟೆ ಟೀಕೆಗಳು ಕೇಳಿಬರ್ತಿವೆ. ಆದ್ರೆ ಕೆಲವರು ಮಾತ್ರ ಸಿನಿಮಾನ ಸಿನಿಮಾದಂತೆ ನೋಡಿ ಅನ್ನೋ ಉಪದೇಶನೂ ಕೊಡ್ತಿದ್ದಾರೆ. ಆದ್ರೆ ಅದೇನೆ ಇದ್ರು ಸಿನಿಮಾದ ಕಲೆಕ್ಷನ್‌ ಮಾತ್ರ ದೊಡ್ಡ ಮಟ್ಟದಲ್ಲಾಗ್ತಾ ಇದೆ. ರಣಬೀರ್‌ ಕಪೂರ್‌ ಅವರ ಸಿನಿ ಕೆರಿಯರ್‌ನಲ್ಲೇ ಅತೀಹೆಚ್ಚು ಕಲೆಕ್ಷನ್‌ ಮಾಡಿದ ಮೂವಿ ಅನಿಮಲ್‌ ಅನ್ನೋ ಹೆಗ್ಗಳಿಕೆ ಸೃಷ್ಟಿಸಿದೆ. ಮೊದಲನೇ ದಿನ 52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಅನಿಮಲ್‌, ಎರಡನೇ ದಿನ 57 ಕೋಟಿ ರೂಪಾಯಿ ಬಾಚಿತ್ತು.
ಉಳಿದಂತೆ
3ನೇ ದಿನ 61 ಕೋಟಿ,
4ನೇ ದಿನ 38 ಕೋಟಿ,
5ನೇ ದಿನ 32 ಕೋಟಿ,
6ನೇ ದಿನ 26 ಕೋಟಿ,
7ನೇ ದಿನ 22 ಕೋಟಿ,
8ನೇ ದಿನ 21 ಕೋಟಿ,
9ನೇ ದಿನ 34 ಕೋಟಿ
ಕಲೆಕ್ಟ್‌ ಮಾಡಿ… ಇಲ್ಲಿ ತನಕ 9 ದಿನದಲ್ಲಿ ಒಟ್ಟು 344 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ನೇಪಥ್ಯಕ್ಕೆ ಸರಿದು ಹೋಗ್ತಿದ್ದ ರಣಬೀರ್‌ ಕಪೂರ್‌ಗೆ ದೊಡ್ಡ ಬ್ರೇಕ್‌ ಕೊಟ್ಟಿದೆ.

ಆದ್ರೆ ಒಂದು ಸಿನಿಮಾ ಯಶಸ್ಸು ತಿಳಿಸೋಕೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಒಂದೇ ಮಾನದಂಡ ಅಲ್ಲ. ಅದು ಜನರ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನೋದು ಕೂಡ ಮ್ಯಾಟರ್‌ ಆಗುತ್ತೆ. ಹೀಗಾಗಿ ಹಿಂಸೆಯನ್ನ ಪ್ರಚೋದಿಸುವಂತಹ ಸಿನಿಮಾಗಳು ಸಮಾಜದ ಮೇಲೆ ಏನು ಇಂಪ್ಯಾಕ್ಟ್‌ ಬೀರಬಹುದು ಅನ್ನೋದ್ರ ಬಗ್ಗೆ ನಾವು ಮಾಡಿದ ಈ ವಿಶೇಷ ವರದಿಯನ್ನ ನೀವು ಚೆಕ್‌ ಮಾಡ್ಬಹುದು.

-masthmaga.com

 

Contact Us for Advertisement

Leave a Reply