ಭಾರತ ಎಲ್ಲರಿಗೂ ಸಮಾನವಾಗಿ ಸೇರಿದೆ: ದೆಹಲಿಯ CSDS ಸಮೀಕ್ಷೆ

masthmagaa.com:

ಹಿಂದೂ ಮೆಜಾರಿಟಿ ಇರೋ ಭಾರತ ಕೇವಲ ಹಿಂದೂಗಳಿಗೆ ಮಾತ್ರವಲ್ಲ… ಎಲ್ಲಾ ಧರ್ಮದ ನಾಗರಿಕರಿಗೆ ಸಮಾನವಾಗಿ ಸೇರಿದೆ. ಭಾರತದಲ್ಲಿ ಎಲ್ಲರೂ ಒಂದೇ ಜನ ಅಭಿಪ್ರಾಯ ಹೊಂದಿದಾರೆ ಅಂತ ಇತ್ತೀಚೆಗೆ ನಡೆಸಲಾದ ಚುನಾವಣಾ ಪೂರ್ವ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ದೆಹಲಿ ಮೂಲದ ರಿಸರ್ಚ್‌ ಸಂಸ್ಥೆ CSDS ಅಥ್ವಾ ಸೆಂಟರ್‌ ಪಾರ್ ಸ್ಡಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌‌ ಈ ಸಮೀಕ್ಷೆ ನಡೆಸಿತ್ತು. ಇದ್ರ ಪ್ರಕಾರ 79% ಭಾರತೀಯರು ಅಂದ್ರೆ 10ರಲ್ಲಿ ಆಲ್ಮೋಸ್ಟ್ 8 ಮಂದಿ, ಭಾರತ ಕೇವಲ ಹಿಂದೂಗಳಿಗೆ ಮಾತ್ರವಲ್ದೇ ಎಲ್ಲಾ ಧರ್ಮದ ನಾಗರಿಕರಿಗೆ ಸಮಾನವಾಗಿ ಸೇರಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೇವಲ 11% ಭಾರತೀಯರು ಮಾತ್ರ, ಈ ಭಾರತ ಕೇವಲ ಹಿಂದೂ ಸಮುದಾಯದವ್ರಿಗೆ ಸೇರಿದ್ದು ಅಂತ ಹೇಳಿದ್ದಾರೆ. 10% ಭಾರತೀಯರು ಈ ಬಗ್ಗೆ ತಮ್ಮ ಒಪಿನಿಯನ್‌ ನೀಡೋಕೆ ನಿರಾಕರಿಸಿದ್ದಾರೆ.

-masthmagaa.com

Contact Us for Advertisement

Leave a Reply