masthmagaa.com:
ಒಂದು ಕಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅನ್ನ ಎದುರಿಸೋಕೆ ವಿರೋಧ ಪಕ್ಷಗಳು ಸಜ್ಜಾಗ್ತಿದ್ರೆ ಮತ್ತೊಂದ್ ಕಡೆ ಬಿಜೆಪಿ ಕೂಡ ತನ್ನ ಮೈತ್ರಿಕೂಟವನ್ನ ಬಲಸಪಡಿಸಿಕೊಳ್ಳಲು ಟ್ರೈ ಮಾಡ್ತಿದೆ. ನಾಳೆ NDA ಮೀಟಿಂಗ್ನಲ್ಲಿ 38ಕ್ಕೂ ಹೆಚ್ಚು ಪಕ್ಷಗಳು ಭಾಗಿಯಾಗಲಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು LJP ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವ್ರಿಗೆ NDA ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ರು. ಇದೀಗ ತಮ್ಮ ಪಕ್ಷಕ್ಕೆ 6 ಲೋಕಸಭಾ ಸ್ಥಾನಗಳು ಮತ್ತು ಒಂದು ರಾಜ್ಯಸಭಾ ಸ್ಥಾನದ ಬೇಡಿಕೆಯನ್ನ ಬಿಜೆಪಿ ಒಪ್ಕೊಬೇಕು ಅಂತ ಚಿರಾಗ್ ಒತ್ತಾಯಿಸಿದ್ದಾರೆ ಅಂತ ತಿಳಿದು ಬಂದಿದೆ. ಚಿರಾಗ್ ಈಗಾಗಲೇ ಬಿಜೆಪಿ ನಾಯಕರ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಅಲ್ದೆ ಚಿರಾಗ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಅನ್ನೊ ಊಹಾಪೋಹಗಳಿವೆ. ಆದರೆ ಈ ಬಗ್ಗೆ ಚಿರಾಗ್ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
-masthmagaa.com
Contact Us for Advertisement