ಭಕ್ತರಿಗೆ ಬಾಗಿಲು ತೆರೆದ ಅಯ್ಯಪ್ಪ… ಇದನ್ನ ಪಾಲಿಸಿದ್ರೆ ಮಾತ್ರ ದರ್ಶನ

masthmagaa.com:

ಕೇರಳ: ಕೊರೋನಾ ಲಾಕ್‌ಡೌನ್‌ನಿಂದ ಕಳೆದ 7 ತಿಂಗಳ ಕಾಲ ಪ್ರವೇಶ ನಿರ್ಬಂಧಿಸಿದ್ದ ಶಬರಿಮಲೆ ದೇವಸ್ಥಾನದಲ್ಲಿ ಇಂದಿನಿಂದ ಸಾರ್ವಜನಿಕರ ಪ್ರವೇಶ ಆರಂಭವಾಗಿದೆ. ಪ್ರತಿದಿನ ಕೇವಲ 250 ಭಕ್ತಾದಿಗಳಿಗೆ ಪ್ರವೇಶವಿದ್ದು, ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಪ್ರವೇಶದ ಮೊದಲ ದಿನವಾದ ಇಂದು 246 ಭಕ್ತಾದಿಗಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ದೇವಸ್ಥಾನ ಪ್ರವೇಶ ಬಯಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಕೊರೊನಾ ನೆಗೆಟಿವ್‌ ಮತ್ತು ಫಿಟ್ನೆಸ್‌ ವರದಿಯನ್ನು ಹೊಂದಿರಬೇಕು. ಜೊತೆಗೆ ಇನ್ನಿತರ ಕೋವಿಡ್-‌ 19ರ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತೆ. ಇನ್ನು ಭಕ್ತರು ಮುಖ್ಯ ದೇವಾಲಯದ ಸನ್ನಿಧಾನದಲ್ಲಿ ರಾತ್ರಿಯಿಡೀ ನಿಲ್ಲುವುದು, ಪಂಪಾ ನದಿಯಲ್ಲಿ ಸ್ನಾನ ಮಾಡುವುದಕ್ಕೆ ನಿಬಂಧ ಹೇರಲಾಗಿದೆ. ಜೊತೆಗೆ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ರಾಜ್ಯಾಡಳಿತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply