ಇನ್​​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ‘ಕಿಂಗ್​’ ಕೊಹ್ಲಿ!

masthmagaa.com:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಶತಕ ಸಿಡಿಸಿದ್ದಾರೆ. ಈ ಸಲ ಸೆಂಚುರಿ ಬಾರಿಸಿರೋದು ಕ್ರಿಕೆಟ್​ನಲ್ಲಿ ಅಲ್ಲ.. ಸೋಷಿಯಲ್ ಮೀಡಿಯಾದಲ್ಲಿ. ಹೌದು, 32 ವರ್ಷ ವಯಸ್ಸಿನ ಕೊಹ್ಲಿಗೆ ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ (10 ಕೋಟಿ)​ ಫಾಲೋವರ್ಸ್ ಆಗಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿರೋ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಐಸಿಸಿ ಕೂಡ ಟ್ವೀಟ್ ಮಾಡಿದೆ. ಅಲ್ಲದೆ ಏಷ್ಯಾ-ಪೆಸಿಫಿಕ್ ಭಾಗದಲ್ಲೂ ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಇನ್ನು ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರೋ 4ನೇ ಕ್ರೀಡಾಪಟು ಕೂಡ ವಿರಾಟ್ ಕೊಹ್ಲಿ ಆಗಿದ್ದಾರೆ. ಮೊದಲ ಸ್ಥಾನದಲ್ಲಿರೋ ಪೂರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ 265 ಮಿಲಿಯನ್, ಎರಡನೇ ಸ್ಥಾನದಲ್ಲಿರೋ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್​ ಲಿಯೋನೆಲ್ ಮೆಸ್ಸಿ 186 ಮಿಲಿಯನ್ ಮತ್ತು ಬ್ರೆಜಿಲ್​ ಫುಟ್ಬಾಲ್ ಆಟಗಾರ ನೇಮರ್ 147 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಕ್ರೀಡಾಪಟುಗಳನ್ನ ಹೊರತುಪಡಿಸಿದ್ರೆ, ಅಮೆರಿಕದ ಸಿಂಗರ್ ಮತ್ತು ನಟಿ ಅರಿಯಾನಾ ಗ್ರಾಂಡೆ 224 ಮಿಲಿಯನ್ (22.4 ಕೋಟಿ), ಹಾಲಿವುಡ್​ ನಟ ಡ್ವೇನ್​ ಜಾನ್ಸನ್ (ದಿ ರಾಕ್) 220 ಮಿಲಿಯನ್, ಅಮೆರಿಕದ ಸಿಂಗರ್ ಬಿಯೋನ್ಸೆ 167 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply